ಪೊನ್ನಂಪೇಟೆ, ಫೆ. 5: ಜನಾಂಗ ಸಾಮಾಜಿಕವಾಗಿ ಮುಂದುವರಿ ಯಲು ಇಂದಿನ ಕಾಲಘಟ್ಟದಲ್ಲಿ ರಾಜಕೀಯ ಸ್ಥಾನಮಾನಗಳು ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಸಂಸ್ಥೆಯ ವತಿಯಿಂದ ಜನಾಂಗದವರಿಗಾಗಿ ರಾಜಕೀಯ ಸ್ಥಾನಮಾನದ ಬೇಡಿಕೆಯನ್ನು ಮುಂದಿಡುವದರಲ್ಲಿ ಯಾವದೇ ತಪ್ಪಿಲ್ಲ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ) ತನ್ನ ನಿಲುವು ಪ್ರಕಟಿಸಿದೆ.
ವೀರಾಜಪೇಟೆಯಲ್ಲಿ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಕುವೇಂಡ ವೈ.ಹಂಝತುಲ್ಲಾ ಅವರ ಅಧ್ಯಕ್ಷತೆ ಯಲ್ಲಿ ನಡೆದ ಕೆ.ಎಂ.ಎ. ಪದಾಧಿಕಾರಿ ಗಳ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ವಾಗಿ ಚರ್ಚೆ ನಡೆಸಲಾಯಿತು.
ಕೊಡಗಿನಲ್ಲಿರುವ ಜನಾಂಗ ದವರು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ಬಹುಪಾಲು ಜನರು ಕಾಂಗ್ರೆಸ್ ಪಕ್ಷದ ಪರವಾಗಿ ದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಹೊರತುಪಡಿಸಿದರೆ ಉಳಿದ ರಾಜಕೀಯ ಪಕ್ಷಗಳಿಂದ ಟಿಕೇಟ್ ಕೇಳುವ ಪರಿಸ್ಥಿತಿ ಇಲ್ಲಿಲ್ಲ. ಆದ್ದರಿಂದ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕೊಡವ ಮುಸ್ಲಿಂ ಜನಾಂಗದ ಅರ್ಹ ವ್ಯಕ್ತಿಯೊಬ್ಬರಿಗೆ ಕಾಂಗ್ರೆಸ್‍ನಿಂದ ಟಿಕೇಟ್ ಕೇಳಲು ಸಭೆಯಲ್ಲಿ ನಿರ್ಧರಿಸಲಾಯಿತು. ಒಂದು ವೇಳೆ ಕಾಂಗ್ರೆಸ್‍ನಿಂದ ಸ್ಪರ್ಧಿಸಲು ಟಿಕೆಟ್ ದೊರೆಯದಿದ್ದರೆ ಜನಾಂಗದಿಂದ ವ್ಯಕ್ತಿಯೊಬ್ಬರನ್ನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆ ಮುಂದೆ ಗಂಭೀರವಾಗಿ ಚಿಂತಿಸಿ ತೀರ್ಮಾನ ಕೈಗೊಳ್ಳಲು ನಿರ್ಣಯಿಸಿದ ಸಭೆಯು, ಜನಾಂಗದ ಶೈಕ್ಷಣಿಕ ಪ್ರಗತಿಗಾಗಿ ವಿವಿಧ ಯೋಜನೆಗಳ ಮೂಲಕ ಶ್ರಮಿಸುತ್ತಿರುವಂತೆಯೇ ಸಾಮಾಜಿಕ ಶ್ರೇಯೋಭಿವೃದ್ಧಿಗಾಗಿ ಕೂಡ ಕೆಲಸ ಮಾಡುವದು ಜನಾಂಗದ ಪ್ರಾತಿನಿಧಿಕ ಸಂಘಟನೆಯ ಹೊಣೆಗಾರಿಕೆಯಾಗಿದೆ. ಆದ್ದರಿಂದ ಕೆ.ಎಂ.ಎ ವತಿಯಿಂದ ರಾಜಕೀಯ ಸ್ಥಾನಮಾನಗಳ ಬಗ್ಗೆ ಬೇಡಿಕೆಯಿಟ್ಟರೆ ಅದನ್ನು ಇತರರು ತಪ್ಪಾಗಿ ಭಾವಿಸ ಬೇಕಿಲ್ಲ ಎಂದು ಸಭೆ ಅಭಿಪ್ರಾಯ ಪಟ್ಟಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಅವರು ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ರಾಜಕೀಯ ಪಕ್ಷಯೊಂದರಿಂದ ಪ್ರಗತಿಗಾಗಿ ವಿವಿಧ ಯೋಜನೆಗಳ ಮೂಲಕ ಶ್ರಮಿಸುತ್ತಿರುವಂತೆಯೇ ಸಾಮಾಜಿಕ ಶ್ರೇಯೋಭಿವೃದ್ಧಿಗಾಗಿ ಕೂಡ ಕೆಲಸ ಮಾಡುವದು ಜನಾಂಗದ ಪ್ರಾತಿನಿಧಿಕ ಸಂಘಟನೆಯ ಹೊಣೆಗಾರಿಕೆಯಾಗಿದೆ. ಆದ್ದರಿಂದ ಕೆ.ಎಂ.ಎ ವತಿಯಿಂದ ರಾಜಕೀಯ ಸ್ಥಾನಮಾನಗಳ ಬಗ್ಗೆ ಬೇಡಿಕೆಯಿಟ್ಟರೆ ಅದನ್ನು ಇತರರು ತಪ್ಪಾಗಿ ಭಾವಿಸ ಬೇಕಿಲ್ಲ ಎಂದು ಸಭೆ ಅಭಿಪ್ರಾಯ ಪಟ್ಟಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಅವರು ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ರಾಜಕೀಯ ಪಕ್ಷಯೊಂದರಿಂದ ತಾನು ವೀರಾಜಪೇಟೆ ಕ್ಷೇತ್ರದಿಂದ ರಾಜಕೀಯ ಪಕ್ಷಯೊಂದರ ಅಧೀಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಲು ಒಪ್ಪಿರುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಇದು ಕೇವಲ ಉಹಾಪೋಹಗಳಷ್ಟೆ. ಎಂದರು. ಸಭೆಯಲ್ಲಿ ಕೆ.ಎಂ.ಎ. ಪದಾಧಿಕಾರಿಗಳಾದ ಆಲೀರ ಎ. ಅಹಮದ್ ಹಾಜಿ, ನಿವೃತ್ತ ಉಪ ತಹಶೀಲ್ದಾರ್ ಚಿಮ್ಮಿಚ್ಚೀರ ಎ.ಅಬ್ದುಲ್ಲಾ ಹಾಜಿ, ಹರಿಶ್ಚಂದ್ರಂಡ ಎ. ಹಂಸ, ಕರ್ತೋರೆರ ಕೆ. ಮುಸ್ತಪಾ, ಮಂಡೇಂಡ ಎ. ಮೊಯಿದು, ಚಿಮ್ಮಿಚ್ಚೀರ ಕೆ.ಇಬ್ರಾಹಿಂ (ಉಮ್ಣಿ), ಪೊಯಕೆರ ಎಸ್. ಮೊಹಮ್ಮದ್ ರಫೀಕ್, ಮೀತಲತಂಡ ಎಂ. ಇಸ್ಮಾಯಿಲ್, ಕುಪ್ಪಂದಿರ ಎಂ. ಯಾಹ್ಯ, ಪುದಿಯತ್ತಂಡ ಹೆಚ್.ಸಂಶುದ್ದೀನ್, ಪುದಿಯಾಣೆರ ಎಂ. ಹನೀಫ, ಕುರಿಕಡೆರ ಎ.ಅಬ್ದುಲ್ ಸಮದ್, ಮಂದಮಾಡ ಎಸ್. ಇಸ್ಮಾಯಿಲ್ ಮೊದಲಾದವರು ಹಾಜರಿದ್ದರು. ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ಸ್ವಾಗತಿಸಿ ವಂದಿಸಿದರು.