ಶನಿವಾರಸಂತೆ, ಫೆ. 4: ಸಮೀಪದ ಮುಳ್ಳೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ ಜಾನಪದ ಜಾತ್ರೆ ಪ್ರಯುಕ್ತ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಗ್ರಾಮಸ್ಥರಿಗೆ ಜಾನಪದ ಆಟೋಟಗಳ ಸ್ಪರ್ಧೆ ಏರ್ಪಡಿಸಲಾಗಿತ್ತು.
ಬೆಳೆಗಾರ ವೇದಕುಮಾರ್ ಸ್ಪರ್ಧೆಯನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ವಿಜಯಕುಮಾರ್ ಸ್ಪರ್ಧೆಯನ್ನು ನಿರ್ವಹಿಸಿದರು. ಹಗ್ಗ-ಜಗ್ಗಾಟ, ಮಡಿಕೆ ಒಡೆಯುವದು, ಗುಡ್ಡಗಾಡು ಓಟ, ಬಸ್ ಹತ್ತುವ ಆಟ, ಗೋಣಿಚೀಲ ಓಟ, ಕಪ್ಪೆ ಓಟ ಇತ್ಯಾದಿ ಗ್ರಾಮೀಣ ಆಟಗಳನ್ನು ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಆಡಿ ಸಂಭ್ರಮಿಸಿದರು. ನಿಡ್ತ ಗ್ರಾಮದ ಸರಕಾರಿ ಪ್ರೌಢಶಾಲೆ ಹಾಗೂ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಿವಣ್ಣ ಮತ್ತು ದಿನೇಶ್ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
ವಿಜೇತರು: ಪುರುಷರ ವಿಭಾಗದ ಹಗ್ಗ-ಜಗ್ಗಾಟದಲ್ಲಿ ಬಸವೇಶ್ವರ ಯುವಕ ಸಂಘ ಪ್ರಥಮ, ಸವೆನ್ ಬುಲೆಟ್ಸ್ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ರಾಕ್ ಹನಿ ಗಲ್ರ್ಸ್ ಪ್ರಥಮ ಸ್ಥಾನ ಸವೆನ್ ಬುಲೆಟ್ಸ್ ದ್ವಿತೀಯ ಸ್ಥಾನ ಗಳಿಸಿದರು. ಗುಡ್ಡಗಾಡು ಓಟದ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಮಧು ಪ್ರಥಮ, ಪ್ರದೀಪ್ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ರೂಪಾ ಪ್ರಥಮ, ಮಮತಾ ದ್ವಿತೀಯ ಸ್ಥಾನ. ಮಡಿಕೆ ಒಡೆಯುವ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ದೀಪಕ್ ಪ್ರಥಮ, ಸಂಜಯ್ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಮಮತಾ ಪ್ರಥಮ, ರೂಪಾ ದ್ವಿತೀಯ ಸ್ಥಾನ. ಬಸ್ ಹತ್ತುವ ಆಟದಲ್ಲಿ ಸಂಜಯ್ ಪ್ರಥಮ, ಶಶಾಂಕ್ ದ್ವಿತೀಯ ಸ್ಥಾನ ಗಳಿಸಿದರು. ವಿಜೇತರಿಗೆ ತಾ. 3 ರಂದು ನಡೆಯುವ ಜಾನಪದ ಜಾತ್ರೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವದು.