ಮಡಿಕೇರಿ, ಫೆ. 5: ಕೊಡಗು ಪ್ರೆಸ್ ಕ್ಲಬ್‍ನ ಹತ್ತೊಂಭತ್ತನೇ ವಾರ್ಷಿಕೋತ್ಸವ ತಾ. 10 ರಂದು ಪತ್ರಿಕಾ ಭವನ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರೆಸ್ ಕ್ಲಬ್ ಜಂಟಿ ಕಾರ್ಯದರ್ಶಿ ವಿಘ್ನೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ಅಂದು ಸಂಜೆ 6.30 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಮುಖ್ಯಅತಿಥಿಗಳಾಗಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ, ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಮಾಜಿ ಅಧ್ಯಕ್ಷ ಚಿ.ನಾ. ಸೋಮೇಶ್ ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಕ್ಲಬ್‍ನ 12 ಸಾಧಕ ಸದಸ್ಯರನ್ನು ಸನ್ಮಾನಿಸಲಾಗುತ್ತದೆ.
ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿರುವ ಉಳ್ಳಿಯಡ ಎಂ. ಪೂವಯ್ಯ (ಬ್ರಹ್ಮಗಿರಿ), ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪಡೆದಿರುವ ಅಜ್ಜಮಾಡ ರಮೇಶ್ ಕುಟ್ಟಪ್ಪ (ವಿಜಯವಾಣಿ), ಛಾಯಾಚಿತ್ರ ಕ್ಷೇತ್ರದಲ್ಲಿನ ಸಾಧನೆಗಾಗಿ ಜೀವನ್ ಪಾಲೇಕಾಡ್ (ಪ್ರಜಾ ಟಿವಿ), ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದಿಂದ ಪ್ರಶಸ್ತಿ ಪಡೆದಿರುವ ಕಾಯಪಂಡ ಶಶಿ ಸೋಮಯ್ಯ (ಶಕ್ತಿ), ಎಂ.ಎನ್. ಚಂದ್ರಮೋಹನ್ (ಶಕ್ತಿ), ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾಗಿ ರುವ ಐತಿಚಂಡ ರಮೇಶ್ ಉತ್ತಪ್ಪ (ವಿಜಯಕರ್ನಾಟಕ), ಅಮ್ಮಣಿಚಂಡ ಪ್ರವೀಣ್ ಚಂಗಪ್ಪ (ಬ್ರಹ್ಮಗಿರಿ), ಅಜ್ಜಮಾಡ ಕುಶಾಲಪ್ಪ (ಪ್ರಜಾಸತ್ಯ), ಬೊಳ್ಳಜೀರ ಬಿ. ಅಯ್ಯಪ್ಪ (ಕಾವೇರಿ ಟೈಮ್ಸ್), ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಮಧುಸೂದನ್ (ಕಾವೇರಿ ಟೈಮ್ಸ್), ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ. ವಿಜೇತ (ಸಂಯುಕ್ತ ಕರ್ನಾಟಕ), ಶ್ರೀ ನಾರಾಯಣಗುರು ಸೇವಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಎ. ಭಾಸ್ಕರ್ (ವಿಶ್ವವಾಣಿ) ಅವರನ್ನು ಸನ್ಮಾನಿಸಲಾಗುತ್ತದೆ.
ಕೆ.ಬಿ. ಮಹಂತೇಶ್ ಜ್ಞಾಪಕಾರ್ಥವಾಗಿ 2017ನೇ ಸಾಲಿನ ಅತ್ಯುತ್ತಮ ವರದಿಗೆ ನೀಡುವ ಪರಿಣಾಮಕಾರಿ ವರದಿ ಪ್ರಶಸ್ತಿಯನ್ನು ಐಮಂಡ ಗೋಪಾಲ್ ಸೋಮಯ್ಯ (ಬಿ ಟಿವಿ) ಅವರಿಗೆ ಪ್ರದಾನ ಮಾಡಲಾಗುತ್ತದೆ. ಪತ್ರಕರ್ತರಿಗೆ ನಡೆದ ಟೇಬಲ್ ಟೆನ್ನಿಸ್, ಕೇರಂ, ಚೆಸ್, ಮೈಂಡ್ ಗೇಮ್‍ನಲ್ಲಿ ವಿಜೇತರಾದ ಪತ್ರಕರ್ತರಿಗೆ ಬಹುಮಾನ ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.