ಸುಂಟಿಕೊಪ್ಪ, ಫೆ.5: ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ ಮತ್ತು ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇತ್ತೀಚೆಗೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕನ್ನಡ ಆಶುಭಾಷಣ ಸ್ಪರ್ದೆಯಲ್ಲಿ ಸಮೀಪದ ಮಾದಾಪುರ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಎಂ.ಕೆ. ರಾಹಿಲ್ ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಕನ್ನಡ ಭಾಷಾ ಶುದ್ಧತೆಯ ಬಗ್ಗೆ ವಿದ್ಯಾರ್ಥಿಗಳ ಪಾತ್ರ ಕುರಿತಾದ ವಿಷಯದಲ್ಲಿ ಭಾಷಣವನ್ನು ಮಾಡಿದ ಈತ ಪ್ರಥಮ ಸ್ಥಾನಕ್ಕೆ ಭಾಜನರಾದರೆ, ‘ಭಾಷಣಕಾರನಿಗೆ ಭಾಷೆಯ ಬಗ್ಗೆ ಇರುವ ಹಿಡಿತ ಈ ವಿಷಯವನ್ನು ಮಂಡಿಸಿದ ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎನ್.ಎನ್. ಐಶ್ವರ್ಯ ದ್ವಿತೀಯ ಸ್ಥಾನವನ್ನು ಪಡೆದು ಇಬ್ಬರು ವಿದ್ಯಾರ್ಥಿಗಳು ತಾಲೂಕು ಮಟ್ಟದ ಆಶುಭಾಷಣ ಸ್ಪರ್ದೆಗೆ ಆಯ್ಕೆಯಾಗಿದ್ದಾರೆ.
ಬಹುಮಾನವನ್ನು ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಡಿ.ನರಸಿಂಹ, ಕಾರ್ಯಕ್ರಮದ ಸಂಚಾಲಕ ಕುಶಾಲನಗರದ ಸುಂದರ, ಕಸಾಪ ಪ್ರಧಾನ ಕಾರ್ಯದರ್ಶಿ ಸತೀಶ್ ಶೇಟ್ ವಿತರಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಸುಂಟಿಕೊಪ್ಪ ಹೋಬಳಿ ಕಸಾಪ ಅಧ್ಯಕ್ಷ ಸುನಿಲ್, ತಾಲ್ಲೂಕು ಸದಸ್ಯ ಪಿ.ಎಫ್. ಸಭಾಸ್ಟೀನ್, ಸದಸ್ಯರಾದ ಟಿ.ಜಿ.ಪ್ರೇಮ್ ಕುಮಾರ್, ವಿನ್ಸೆಂಟ್ ಎಂ.ಬಿ, ಬಿ.ಕೆ.ಶಶಿಕುಮಾರ್ ರೈ, ಅಶೋಕ್ ಶೇಟ್, ಫಿಲಿಪ್ ವಾಸ್, ಈಶ ಇತರರು ಇದ್ದರು.