ಸೋಮವಾರಪೇಟೆ: ಇಲ್ಲಿನ ಜೆ.ಸಿ.ಐ. ಸೋಮವಾರಪೇಟೆ ಪುಷ್ಪಗಿರಿ ವತಿಯಿಂದ ಸಂತ ಜೋಸೆಫರ ಪ್ರೌಢಶಾಲೆ ಮತ್ತು ಕಾಲೇಜಿನಲ್ಲಿ ರಾಷ್ಟ್ರೀಯ ಭಾವೈಕ್ಯತಾ ದಿನವನ್ನು ಆಚರಿಸಲಾಯಿತು. ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಭಾವೈಕ್ಯತೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಈ ಸಂದರ್ಭ ಜೆ.ಸಿ.ಐ. ಅಧ್ಯಕ್ಷ ಕೆ.ಎ. ಪ್ರಕಾಶ್, ಕಾರ್ಯದರ್ಶಿ ಎಂ.ಎ. ರುಬೀನಾ, ಜೇಸಿರೇಟ್ ಅಧ್ಯಕ್ಷೆ ಮಹೇಶ್ವರಿ, ಪದಾಧಿಕಾರಿಗಳಾದ ಗಿರೀಶ್, ರಾಜೇಶ್, ವಿಜಿ ವಸಂತ್, ಜ್ಯೋತಿ, ಮೀನ, ಕಾಲೇಜು ಪ್ರಾಂಶುಪಾಲರುಗಳು, ಶಿಕ್ಷಕ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗ್ರಾಮೀಣ ಅಧ್ಯಯನ ಶಿಬಿರ
ಮಡಿಕೇರಿ: ಮಂಗಳೂರು ವಿ.ವಿ. ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರದಿಂದ ಕಕ್ಕಬೆ ಗ್ರಾ.ಪಂ., ಕುಂಜಿಲ ಸರಕಾರಿ ಶಾಲೆ, ಥಾಮರ ಕೂರ್ಗ್, ಮಿಸ್ಟಿ ವುಡ್ ರೆಸಾರ್ಟ್ ಸಹಯೋಗದಲ್ಲಿ ತಾ. 6 ರಿಂದ 12 ರವರೆಗೆ ಗ್ರಾಮೀಣ ಅಧ್ಯಯನ ಶಿಬಿರ ಆಯೋಜಿಸಲಾಗಿದೆ. ಶಾಲಾ ಆವರಣದಲ್ಲಿ ಕಕ್ಕಬೆ-ಕುಂಜಿಲ ಪರಿಸರದಲ್ಲಿ ನಡೆಯುವ ಶಿಬಿರದಲ್ಲಿ ಗ್ರಾಮೀಣ ಜನತೆಯ ಬದುಕಿನೊಂದಿಗೆ ಸಾಮಾಜಿಕ ಅರಿವು ಮೂಡಿಸುವದು, ಪಿಡುಗುಗಳ ನಿವಾರಣೆ, ವಿದ್ಯಾರ್ಥಿಗಳ ಹೊಣೆಗಾರಿಕೆಯೊಂದಿಗೆ ಕೌಶಲ್ಯ ಅಭಿವೃದ್ಧಿ, ಗ್ರಾಮೀಣ ಜನತೆ ನಡುವೆ ಬದುಕಿಗೆ ಪ್ರೋತ್ಸಾಹ, ಪ್ರತಿಭೆ ಪ್ರದರ್ಶನ, ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಲಾಗುವದು ಎಂದು ಸ್ನಾತಕೋತ್ತರ ಕೇಂದ್ರದ ಪ್ರಕಟಣೆ ತಿಳಿಸಿದೆ. ತಾ. 6 ರಂದು ಅಪರಾಹ್ನ 2 ಗಂಟೆಗೆ ಉದ್ಘಾಟನೆಯೊಂದಿಗೆ ತಾ. 12 ರಂದು ಅಪರಾಹ್ನ 2 ಗಂಟೆಗೆ ಸಮಾರೋಪಗೊಳ್ಳಲಿರುವ ಶಿಬಿರದಲ್ಲಿ ಜನಪ್ರತಿನಿಧಿಗಳ ಸಹಿತ ವಿಷಯ ತಜ್ಞರು, ಸಂಘ-ಸಂಸ್ಥೆಗಳ ಮುಖಂಡರು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಬ್ಯಾಡ್‍ಮಿಂಟನ್‍ನಲ್ಲಿ ಸಾಧನೆ