ಮಡಿಕೇರಿ. ಫೆ. 4: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ತಲಕಾವೇರಿ ಕ್ಷೇತ್ರದಲ್ಲಿ ಅಗಸ್ತ್ಯೇಶ್ವರನಿಗೆ ರುದ್ರಾಭಿಷೇಕ ಪೂಜೆ ನಡೆಯಿತು. ಈ ಸಂದರ್ಭ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ಜೀವನದಿ ಕಾವೇರಿಗೆ ಲಿವಿಂಗ್ ಎಂಟಿಟಿ ವಿಥ್ ಲೀಗಲ್ ಪರ್ಸನ್ ಸ್ಟೇಟಸ್ (ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನಕ್ಕಾಗಿ) ಹಕ್ಕೊತ್ತಾಯ ಮಂಡಿಸಿ ಸಿ.ಎನ್.ಸಿ ಆಶ್ರಯದಲ್ಲಿ ತಲಕಾವೇರಿಯಿಂದ - ಪೂಂಪುಹಾರ್‍ವರೆಗೆ ಸದ್ಯದಲ್ಲಿಯೇ ಜಾಥಾ ಹಮ್ಮಿಕೊಳ್ಳುವದಾಗಿ ತಿಳಿಸಿದರು. ಅಲ್ಲದೆ ಕೊಡಗಿನ ನೆಲ, ಜಲ, ಸಂಸ್ಕøತಿ, ಜೀವನ ಮೌಲ್ಯಗಳ ಉಳಿವಿಗಾಗಿ ಸಂಘಟನೆಯಿಂದ ವಿಶೇಷ ಪ್ರಾರ್ಥನೆಯೊಂದಿಗೆ ಇಂದು ಅಗಸ್ತ್ಯೇಶ್ವರನಿಗೆ ಪೂಜೆ ನಡೆಸಿದ್ದಾಗಿ ನುಡಿದರು. ಕಲಿಯಂಡ ಪ್ರಕಾಶ್, ಪುಲ್ಲೆರ ಕಾಳಪ್ಪ, ಕಾಟುಮಣಿಯಂಡ ಉಮೇಶ್, ಅರೆಯಡ ಗಿರೀಶ್, ಬೊಪ್ಪಂಡ ಬೊಳ್ಳಮ್ಮ, ಮಂದಪಂಡ ಮನೋಜ್, ಬೇಪಡಿಯಂಡ ಬಿದ್ದಪ್ಪ, ನಂದಿನೆರವಂಡ ವಿಜು, ಅಪ್ಪಚ್ಚಿರ ರಮ್ಮಿ ನಾಣಯ್ಯ, ಪಟ್ಟಮಾಡ ಕುಶ, ಅಳಮಂಡ ಜೈ, ಮತ್ತಿತರರು ಭಾಗವಹಿಸಿದ್ದರು.