ಗೋಣಿಕೊಪ್ಪಲು ವರದಿ, ಫೆ.5 : 8 ನೇ ರಾಷ್ಟ್ರೀಯ ಸಬ್ ಜೂನಿಯರ್ ಬಾಲಕಿಯರ ಹಾಕಿ ಟೂರ್ನಿಯಲ್ಲಿ ಹಾಕಿಕೂರ್ಗ್ ತಂಡವು ಸೆಮಿಫೈನಲ್ನಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಫೈನಲ್ಗೆ ಲಗ್ಗೆ ಇಟ್ಟಿದೆ. ಮಂಗಳವಾರ ಅತಿಥೇಯ ಹಾಕಿ ಅಸ್ಸಾಂ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ. ಅಸ್ಸಾಂನ ಕಾಲಿಬೊರ್ ಮೈದಾನದಲ್ಲಿ ಉತ್ತರಾಖಂಡ್ ವಿರುದ್ಧ ನಡೆದ ಸೆಮಿಫೈನಲ್ನಲ್ಲಿ 6-3 ಗೋಲುಗಳ ಮೂಲಕ ಫೈನಲ್ಗೆ ಪ್ರವೇಶ ಪಡೆಯಿತು. ಶೂಟೌಟ್ನಲ್ಲಿ ಪಿ. ಯು. ರಮ್ಯ, ಶಿಲ್ಪ, ಎಂ.ಕೆ ಸುಜಾತ, ಅನ್ನಪೂರ್ಣ ತಲಾ 4 ಗೋಲು ಬಾರಿಸಿದರು.
ಪಂದ್ಯದ ಅವಧಿಯಲ್ಲಿ ಉಭಯ ತಂಡಗಳು 2-2 ಗೋಲುಗಳ ಸಮನಾಂತರ ಸಾಧಿಸಿತು. 31 ನೇ ನಿಮಿಷದಲ್ಲಿ ಎಂ.ಕೆ ಸುಜಾತ, 70 ನೇ ನಿಮಿಷದಲ್ಲಿ ಜಿ. ಕಾವ್ಯ ತಲಾ ಒಂದೊಂದು ಗೋಲು ಹೊಡೆದರು.
ಲೀಗ್ನ ಮೊದಲ ಪಂದ್ಯದಲ್ಲಿ ಸಿಟಿಜನ್ ವಿರುದ್ದ 6-0 ಗೋಲು, ಗುಜರಾತ್ ಹಾಕಿ ವಿರುದ್ದ 10-0 ಗೋಲುಗಳ ಭರ್ಜರಿ ಗೆಲುವು ದಾಖಲಿಸಿತ್ತು. ಮುಂಬಯಿ ವಿರುದ್ಧ 5-0 ಗೋಲುಗಳ ಗೆಲುವು ದಾಖಲಿಸಿ ಸೆಮಿಗೆ ಪ್ರವೇಶ ಪಡೆದಿತ್ತು. ಟೂರ್ನಿಯಲ್ಲಿ ಪೊನ್ನಿಮಾಡ ಶಿಲ್ಪ ಹ್ಯಾಟ್ರಿಕ್ ಗೋಲುಗಳೊಂದಿಗೆ 9 ಗೋಲು, ಪಿ. ಯು. ರಮ್ಯ 6, ಜಿ. ಕಾವ್ಯ 6, ಎಂ.ಕೆ ಸುಜಾತ 2 ಗೋಲು ಬಾರಿಸಿದ್ದಾರೆ.
ತಂಡದಲ್ಲಿ ಹೆಚ್. ಡಿ. ನೇತ್ರಾವತಿ, ಎಂ. ಕೆ. ಸುಜಾತ, ಕೆ. ಎಸ್. ಅನ್ನಪೂರ್ಣ, ಡಿ. ಜೆ. ನವ್ಯ, ಶಯಾ ಕಾವೇರಮ್ಮ, ಹೆಚ್. ಎ. ಅಪ್ಸರಾ, ಪಿ. ಓ. ಶಿಲ್ಪ, ಎಸ್. ಅದಿರಾ, ಕೆ. ಎಸ್. ಸುರಕ್ಷಾ, ಕೆ. ಕೆ. ಗೌತಮಿ, ಕೆ. ಎ. ಪಾರ್ವತಿ, ಪಿ. ಯು. ರಮ್ಯ, ಜಿ. ಕಾವ್ಯ, ಹೆಚ್. ಎಸ್. ಜಾಹ್ನವಿ, ಸಿ. ಕೆ. ಪ್ರಗತಿ, ಟಿ. ಸಿ ಸುಚಿತ್ರಾ, ಎಸ್. ಹೆಚ್. ಬೃಂದಾ, ಬಿ. ಜಿ. ಜೀವಿತಾ, ತರಬೇತುದಾರರಾಗಿ ವಿನೋದ್, ವ್ಯವಸ್ಥಾಪಕಿಯಾಗಿ ಕುಡೆಕಲ್ ಸವಿತಾ ಪಾಲ್ಗೊಂಡಿದ್ದಾರೆ.