ಗೋಣಿಕೊಪ್ಪ ವರದಿ, ಫೆ. 4: ಕಾಪ್ಸ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯು ತರಗತಿಯ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು.
ಶಾಲಾ ಸಂಪ್ರದಾಯದಂತೆ ಧ್ವಜ ಮತ್ತು ಅಧಿಕಾರ ದಂಡವನ್ನು ವಿದ್ಯಾರ್ಥಿ ನಾಯಕರಿಂದ ಗೌರವ ಪೂರ್ಣವಾಗಿ ಪ್ರಾಂಶುಪಾಲರಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ವಿದ್ಯಾರ್ಥಿಗಳು ಮೊಂಬತ್ತಿ ಬೆಳಕು ಹರಿಸಿ ಪದವಿ ಸ್ವೀಕರಿಸಿದರು. ಈ ಸಂದರ್ಭ ಜೀವನ ಮೌಲ್ಯಗಳನ್ನು ಪ್ರಾಂಶುಪಾಲ ಬೆನ್ನಿ ಕುರಿಯಕೋಸ್ ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುಂಬೈಯ ಟಾಟಾ ಪವರ್ ಕಂಪೆನಿಯ ಮಾಜಿ ಜನರಲ್ ಮ್ಯಾನೆಜರ್ ಕೆ.ಎಸ್. ತಿಮ್ಮಯ್ಯ, ಸರಳ ಜೀವನದ ಆಯ್ಕೆಯೇ ಯಶಸ್ಸಿನ ಕೀಲಿ ಕೈ ಎಂದು ನುಡಿದರು.
ಕಾಪ್ಸ್‍ನ ಆಡಳಿತ ಮಂಡಳಿ ಅಧ್ಯಕ್ಷ ತಿಮ್ಮಯ್ಯ ಮಾತನಾಡಿ, ಜೀವನದ ಏಳು ಬೀಳುಗಳನ್ನು ಸಮಚಿತ್ತವಾಗಿ ಸ್ವೀಕರಿಸಿದಾಗ ಮಾತ್ರ ಬದುಕು ಸಮನ್ವಯಗೊಳ್ಳುತ್ತದೆ ಎಂದರು.