ಸುಂಟಿಕೊಪ್ಪ, ಫೆ.5: ಜೆಸಿಐ ಸಂಸ್ಥೆಯ ತತ್ವ ಆದರ್ಶಗಳು ಸಮಾಜದ ಅಭಿವೃದ್ಧಿಯಲ್ಲಿ ಮಹತ್ತರವಾದ ಪಾತ್ರವಹಿಸುತ್ತದೆ ಎಂದು ಹಾಸನ ಗ್ರಾಹಕರ ವೇದಿಕೆಯ ಅಧ್ಯಕ್ಷ ಎ.ಲೋಕೇಶ್ ಕುಮಾರ್ ಹೇಳಿದರು.

ಇಲ್ಲಿನ ಕೊಡವ ಸಮಾಜದಲ್ಲಿ ಜೆಸಿಐಯ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ರಾಷ್ಟ್ರದ ಸಂಸದರು ಶಾಸಕರಿಗೆ ತರಬೇತಿ ನೀಡುವವರೆಗೂ ಈ ಸಂಸ್ಥೆ ಬೆಳೆದಿದೆ 18ರಿಂದ 40ವರ್ಷದ ವಯೋ ಮಾನದ ಯುವಕರಿಗೆ ನಾಯಕತ್ವ ಗುಣ ವಿಕಸನಕ್ಕೆ ಸಹಕಾರಿಯಾದ ಸಂಸ್ಥೆಯನ್ನು ಯುವಕರು ಸದುಪಯೋಗ ಪಡಿಸಿಕೊಂಡು ಬಲಿಷ್ಠರಾಷ್ಟ್ರ ನಿರ್ಮಾಣ ಮಾಡಲು ದಾಪುಗಾಲು ಹಾಕಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜೆಸಿ ವಲಯ ಅಧ್ಯಕ್ಷ ವಿಕಾಸ್ ಗೂಗ್ಲಿಯ ನೂತನ ಸಾಲಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಜೆಸಿ ವಲಯ ಉಪಾಧ್ಯಕ್ಷÀ ಜೆಫಿನ್‍ಜಾಯ್ ಅತಿಥಿಗಳಾಗಿ ಲೆಕ್ಕ ಪರಿಶೋಧಕ ಪಿ.ಡಬ್ಲ್ಯೂ ಪ್ರಾನ್ಸಿಸ್ ರವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ನಿರ್ಗಮಿತ ಅಧ್ಯಕ್ಷ ಜಿ.ಬಿ.ಹರೀಶ್ ವಹಿಸಿದ್ದರು.

ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷÀ ಜೆಸಿ ಹೆಚ್.ಆರ್.ಅರುಣ್ ಕುಮಾರ್, ಉಪಾಧ್ಯಕ್ಷರುಗಳಾದ ಸತೀಶ್ ಕುಮಾರ್, ಪಿ.ಯು. ನಂದಕುಮಾರ್, ಟಿ.ಜಿ. ಪ್ರೇಮ್ ಕುಮಾರ್, ಸುರೇಶ್ ಕುಶಾಲಪ್ಪ, ಪಿ.ಸಿಮೋಹನ್, ಪ್ರಧಾನ ಕಾರ್ಯದರ್ಶಿ ಎನ್.ಎಸ್.ಆಶೋಕ್ ನಿಡ್ಯಮಲೆ, ಖಜಾಂಜಿ ಜೆಸಿ ನಿರಂಜನ್, ಮಹಿಳಾ ಅಧ್ಯಕ್ಷೆ ರಾಧ ಪ್ರವೀಣ್, ನಿರ್ದೇಶಕರಾಗಿ ರಮ್ಯಾ ಮೋಹನ್, ಸಿ.ಬಿ. ಚಂದ್ರಶೇಖರ್, ಎಸ್.ಎಸ್.ಶಶಾಂಕ್, ರಂಜೀತ್ ಕುಮಾರ್, ಶೈಲಾಜಾ ಮನು ಪ್ರಮಾಣ ವಚನವನ್ನುÀ ಸ್ವೀಕರಿಸಿದರು. ಮೊದಲಿಗೆ ಜೆಸಿ ವಾಣಿಯನ್ನು ಪ್ರೇಮಲತಾ ಎಸ್.ರೈ ವಾಚಿಸಿ, ಜಿ.ಬಿ.ಹರೀಶ್ ಸ್ವಾಗತಿಸಿ, ಕಾರ್ಯದರ್ಶಿ ಎನ್.ಎಸ್.ಆಶೋಕ್ ನಿಡ್ಯಮಲೆ ವಂದಿಸಿದರು.