ಸುಂಟಿಕೊಪ್ಪ, ಫೆ. 4: ಸುಂಟಿಕೊಪ್ಪ ಜೆ.ಸಿ.ಐ. ಸಂಸ್ಥೆ ವತಿಯಿಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ರಾಷ್ಟ್ರೀಯ ಭಾವೈಕ್ಯತಾ ದಿನವನ್ನು ಆಚರಿಸಲಾಯಿತು.
ಜೆ.ಸಿ.ಐ. ಸಂಸ್ಥೆಯ ನೂತನ ಅಧ್ಯಕ್ಷ ಅರುಣ್ ಕುಮಾರ್ ಉಪಸ್ಥಿತಿಯಲ್ಲಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷೆ ಫೆಲ್ಸಿ ಡೆನ್ನಿಸ್ ಮಕ್ಕಳಿಗೆ ರಾಷ್ಟ್ರೀಯ ಭಾವೈಕ್ಯತೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.
ಜೆ.ಸಿ.ಐ. ನಿಕಟಪೂರ್ವ ಅಧ್ಯಕ್ಷ ವೆಂಕಪ್ಪ ಪ್ರತಿಯೊಬ್ಬರು ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆಯನ್ನು ಎತ್ತಿಹಿಡಿಯಬೇಕು ಎಂದರು. ಜೆ.ಸಿ.ಐ. ಸಂಸ್ಥೆಯ ಪ್ರಮುಖರಾದ ಮನು ಅಚ್ಚಮಯ್ಯ, ನಂದಕುಮಾರ್, ಎನ್.ಎಸ್. ಅಶೋಕ್, ನಿರಂಜನ್, ಸಂದೀಪ್, ರಾಮಚಂದ್ರ, ಶಿಕ್ಷಕರಾದ ಟಿ.ಜಿ. ಪ್ರೇಮ್ ಕುಮಾರ್, ಎಂ.ಎನ್. ಲತಾ ಇತರರು ಇದ್ದರು.