ಸೋಮವಾರಪೇಟೆ, ಫೆ. 4: ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕ 1 ಮತ್ತು 2ರ ವಾರ್ಷಿಕ ವಿಶೇಷ ಶಿಬಿರ ತಾ. 5 ರಿಂದ 11 ರವರೆಗೆ ನಂಜರಾಯಪಟ್ಟಣ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ಶಿಬಿರದ ನಿರ್ದೇಶಕ ಪ್ರೊ. ಪಿ.ಎಂ. ಸುಬ್ರಮಣ್ಯ ತಿಳಿಸಿದ್ದಾರೆ.

ತಾ. 5 ರಂದು ಅಪರಾಹ್ನ 2 ಗಂಟೆಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಶಿಬಿರಕ್ಕೆ ಚಾಲನೆ ನೀಡಲಿದ್ದು, ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪಿ.ಎಂ. ಸುಬ್ರಮಣ್ಯ ವಹಿಸಲಿದ್ದಾರೆ. ಜಿ.ಪಂ. ಸದಸ್ಯ ಲತೀಫ್, ತಾ.ಪಂ. ಸದಸ್ಯ ಚಂಗಪ್ಪ, ನಂಜರಾಯಪಟ್ಟಣ ಗ್ರಾ.ಪಂ. ಅಧ್ಯಕ್ಷೆ ಜೈನಬ, ನಂಜರಾಯಪಟ್ಟಣ ವಿದ್ಯಾಸಂಸ್ಥೆ ಅಧ್ಯಕ್ಷ ಅಯ್ಯಂಡ್ರ ಆರ್. ಭೀಮಯ್ಯ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭ ತಾ. 11 ರಂದು ಅಪರಾಹ್ನ 12.30ಕ್ಕೆ ನಡೆಯಲಿದ್ದು, ನಿವೃತ್ತ ಡೆಪ್ಯೂಟಿ ಡೀನ್ ಕೆ.ಎಸ್. ಸೋಮಣ್ಣ ಸಮಾರೋಪ ಭಾಷಣ ಮಾಡಲಿದ್ದಾರೆ. ಜಿ.ಪಂ. ಸದಸ್ಯೆ ಮಂಜುಳಾ, ಕುಶಾಲನಗರ ಪ.ಪಂ. ಅಧ್ಯಕ್ಷೆ ರೇಣುಕಾ ಜಗದೀಶ್, ವಿದ್ಯಾಸಂಸ್ಥೆ ನಿರ್ದೇಶಕ ಕೆ.ಜಿ. ಉತ್ತಯ್ಯ, ಗ್ರಾ.ಪಂ. ಮಾಜಿ ಅಧ್ಯಕ್ಷ ವಿಶ್ವ, ಸಹಕಾರ ಸಂಘದ ಸಿಇಓ ಧನಂಜಯ್, ಉದ್ಯಮಿ ಮುರಳಿ ಮಾದಯ್ಯ, ಬೆಳೆಗಾರ ಎನ್.ಎಂ. ಚಂಗಪ್ಪ ಅವರುಗಳು ಭಾಗವಹಿಸಲಿದ್ದಾರೆ.

ಒಂದು ವಾರಗಳ ಕಾಲ ನಡೆಯುವ ಶಿಬಿರದಲ್ಲಿ ನಂಜರಾಯಪಟ್ಟಣ ಪ್ರೌಢಶಾಲಾ ಆವರಣ ಸ್ವಚ್ಛತೆ, ವಿದ್ಯಾರ್ಥಿಗಳಿಗೆ ವಿಚಾರ ಪ್ರಧಾನ ಶೈಕ್ಷಣಿಕ ಕಾರ್ಯಕ್ರಮ, ವ್ಯಕ್ತಿತ್ವ ವಿಕಸನ, ಶ್ರಮದಾನ, ಜಾಗೃತಿ ಜಾಥಾ, ಸದ್ಭಾವನಾ ಗೋಷ್ಠಿಗಳು ನಡೆಯಲಿದ್ದು, ಸಿ. ಪುಟ್ಟರಾಜು ಮತ್ತು ಟಿ.ಎಂ. ಸುಧಾಕರ್ ಅವರುಗಳು ಶಿಬಿರಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಶಿಬಿರದ ನಿರ್ದೇಶಕ ಸುಬ್ರಮಣ್ಯ ತಿಳಿಸಿದ್ದಾರೆ.