ಮಡಿಕೇರಿ ಫೆ. 5: ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾಗಿ ಜಾನ್ಸನ್ ಪಿಂಟೋ ಹಾಗೂ ಎ.ಬಿ. ಗಣೇಶ್ ಅವರುಗಳನ್ನು ಆಯ್ಕೆ ಮಾಡಿರುವದಾಗಿ ಸಮಿತಿಯ ಅಧ್ಯಕ್ಷ ಬಿ.ವೈ. ರವೀಂದ್ರ ಅಪ್ರು ತಿಳಿಸಿದ್ದಾರೆ.
ಖಜಾಂಚಿಯಾಗಿ ತೊಂಡಿ ಯಂಡ ಕುಶಾಲಪ್ಪ, ಉಪಾಧ್ಯಕ್ಷರು ಗಳಾಗಿ ಹೆಚ್.ಎ.ಹಂಸ, ಮೋಹನ್ ವಿ.ಜಿ, ಮಧು ನಂದಿವೆರವಂಡ, ಕೆ.ಪಿ. ಗಣೇಶ್, ಸುಹಾದ ಅಶ್ರಫ್, ಎಸ್.ಎ. ವಿಕಾಸ್ ಅಚ್ಚಯ್ಯ, ಜಿ.ಆರ್. ಭುವನೇಂದ್ರ, ಭಾರತಿ, ಎಂ.ಎ. ಖಲೀಲ್ಬಾಷಾ, ತೀರ್ಥಕುಮಾರ್, ಕಾರ್ಯ ದರ್ಶಿಗಳಾಗಿ ಇಬ್ರಾಹಿಂ ಸೀದಿ, ಮೊಟ್ಟನ ಕರುಣ ನಾಣಯ್ಯ, ಹೊಸಕೋಟೆ ಮಂಜುನಾಥ್, ಸಹ ಕಾರ್ಯದರ್ಶಿಗಳಾಗಿ ಮಡಿಕೇರಿ ಶಶಿ, ಎಂ.ಎ. ಹನೀಫ ಹಾಗೂ ಕೆ.ಎಸ್. ಮಹಮ್ಮದ್ ಆಯ್ಕೆಯಾಗಿದ್ದಾರೆ.
ಕಾನೂನು ಮಾಧ್ಯಮ ಮತ್ತು ಪ್ರಚಾರ ವಿಭಾಗದ ಸಲಹೆಗಾರರಾಗಿ ಕೆ.ಎ. ನೌಶಾದ್, ಅಣ್ಣಾಚೀರ ಸತೀಶ್, ಕೆ.ಎ. ಮುಸ್ತಾಫ ಹಾಗೂ ಗೌತಮ್ ಶಿವಪ್ಪ ಅವರುಗಳನ್ನು ನೇಮಕ ಮಾಡಿರುವದಾಗಿ ಬಿ.ವೈ. ರವೀಂದ್ರ ಅಪ್ರು ಪತ್ರಿಕಾ ಹೇಳಿಕೆ ನೀಡಿದ್ದಾರೆ.