ಮಡಿಕೇರಿ, ಫೆ. 4: ಕೂಡಿಗೆ ವ್ಯಾಪ್ತಿಯ ನಿವೇಶನ ರಹಿತÀರಿಗೆ ವಿತರಿಸಲು ಮಂಜೂರಾಗಿದ್ದ ಜಾಗದಲ್ಲಿ ದಿಡ್ಡಳ್ಳಿ ಗಿರಿಜನರಿಗೆ ನಿರ್ಮಿತಿ ಕೇಂದ್ರದಿಂದ ಮನೆಗಳನ್ನು ನಿರ್ಮಿಸುತ್ತಿದ್ದರು, ಗ್ರಾ.ಪಂ. ತನ್ನ ಆಸ್ತಿಯ ಸಂರಕ್ಷಣೆÉಗೆ ಮುಂದಾಗದೆ ನಿರ್ಲಕ್ಷ್ಯ ಧೋರಣೆ ವಹಿಸಿದೆಯೆಂದು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎಸ್. ಕಾಂತರಾಜು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳಿಂದ ಮಂಜೂರಾಗಿರುವ 1.50 ಏಕರೆ ಜಾಗದ ಸಂರಕ್ಷಣೆÉಗೆ ಮುಂದಿನ 10 ದಿನಗಳ ಒಳಗಾಗಿ ಗ್ರಾಮ ಪಂಚಾಯಿತಿ ಅಗತ್ಯ ಕ್ರಮ ವಹಿಸದಿದ್ದಲ್ಲಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು.
ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 200 ರಿಂದ 300 ನಿವೇಶನ ರಹಿತÀರಿದ್ದಾರೆ. ಇವರಿಗೆ ಅಗತ್ಯ ನಿವೇಶನ ಒದಗಿಸುವ ಸಲುವಾಗಿ ಕಳೆದ 2017ರ ಮೇ 5 ರಂದು ಜಿಲ್ಲಾಧಿಕಾರಿಗಳು ಸರ್ವೆ ಸಂಖ್ಯೆ 11 ಕ್ಕೆ ಸಂಬಂಧಿಸಿದಂತೆ 1.50 ಏಕರೆ ಜಾಗವನ್ನು ಗ್ರಾಮ ಪಂಚಾಯಿತಿಗೆ ಮಂಜೂರು ಮಾಡಲಾಗಿದೆ. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಹೆಸರಿನಲ್ಲಿ ಜಾಗದ ಖಾತೆಯೂ ಆಗಿದೆಯೆಂದು ತಿಳಿಸಿದ ಕಾಂತರಾಜು, ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ಮಶಾನಕ್ಕಾಗಿ 1 ಎಕರೆ ಮತ್ತು ಕಸ ವಿಲೇವಾರಿಗಾಗಿ 50 ಸೆಂಟ್ ಜಾಗವನ್ನು ಹಿಂದೆ ಒದಗಿಸಲಾಗಿದೆಯೆಂದು ಮಾಹಿತಿ ನೀಡಿದರು.
ನಿವೇಶನ ರಹಿತರಿಗೆ ಮೀಸಲಾಗಿದ್ದ ಜಾಗದಲ್ಲಿ ನಿರ್ಮಿತಿ ಕೇಂದ್ರವು ದಿಡ್ಡಳ್ಳಿಯ ಗಿರಿಜನರಿಗೆಂದು ಅಂದಾಜು 23 ಮನೆಗಳನ್ನು ನಿರ್ಮಿಸುತ್ತಿದೆ. ಹೀಗಿದ್ದೂ ಗ್ರಾಮ ಪಂಚಾಯ್ತಿಯ ಆಡಳಿತ ಮಂಡಳಿ ಪಂಚಾಯಿತಿಗೆ ಮಂಜೂರಾದ ಜಾಗದ ಸಂರಕ್ಷಣೆಯ ಬಗ್ಗೆ ಕಿಂಚಿತ್ ಕಾಳಜಿ ವಹಿಸಿಲ್ಲವೆಂದು ಆರೋಪಿಸಿದರು.
ಗ್ರಾಮ ಪಂಚಾಯಿತಿಗೆ ಮಂಜೂರಾದ ಜಾಗದ ಹದ್ದುಬಸ್ತಿನ ಸರ್ವೇ ಕಾರ್ಯಗಳಿಗೆ ಸಂಬಂಧಪಟ್ಟಂತೆ ಪಂಚಾಯಿತಿಯ ಅಧ್ಯಕ್ಷರಾದಿಯಾಗಿ ಯಾವೊಬ್ಬ ಸದಸ್ಯರು ಆಸಕ್ತಿ ವಹಿಸುತ್ತಿಲ್ಲ. ಪಂಚಾಯಿತಿ ಆಸ್ತಿಯ ಸಂರಕ್ಷಣೆÉ ಸಾಧ್ಯವಾಗದಿದ್ದಲ್ಲಿ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರು ರಾಜೀನಾಮೆ ನೀಡಲಿ ಎಂದು ಕಾಂತರಾಜು ಆಗ್ರಹಿಸಿದರು.