ಗೋಣಿಕೊಪ್ಪ ವರದಿ, ಫೆ. 5 : ಪೊನ್ನಂಪೇಟೆ ನಿವಾಸಿ ಪೃಥ್ವಿ ಎಂಬವರ ಪತ್ನಿ, ಮಗು ಸೇರಿದಂತೆ ಮೂವರು ನಾಪತ್ತೆಯಾಗಿರುವ ಘಟನೆ ಪೊನ್ನಂಪೇಟೆಯಲ್ಲಿ ನಡೆದಿದೆ. ಪೊನ್ನಂಪೇಟೆಯ ನಿವಾಸಿ, ಪಿ. ಪಿ. ಕಾವ್ಯ (25), ಆಕೆಯ 3 ವರ್ಷದ ಪುತ್ರಿ ಮತ್ತು ನಾದಿನಿ ಪ್ರಿಯಾ (19) ಕಾಣೆಯಾಗಿರುವವರು. ಕಾವ್ಯ ಅವರ ಪತಿ ಪೃಥ್ವಿ ತಾಯಿಗೆ ಅನಾರೋಗ್ಯದ ಕಾರಣ ಮಂಗಳೂರಿಗೆ ತೆರಳಿದ ಸಂದರ್ಭ ಕಳೆದ ಶುಕ್ರವಾರ ಈ ಮೂವರು ಕಾಣೆಯಾಗಿದ್ದಾರೆ. ಪತಿ ಪ್ರಥ್ವಿ ನೀಡಿದ ದೂರಿನಂತೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರು ಕನ್ನಡ ಮತ್ತು ಯರವ ಭಾಷೆ ಮಾತನಾಡುತ್ತಾರೆ. ಪತ್ತೆಯಾದಲ್ಲಿ ಪೊನ್ನಂಪೇಟೆ ಉಪನಿರೀಕ್ಷಕರು 08274-249044 ಸಂಖ್ಯೆಗೆ ಮಾಹಿತಿ ನೀಡಬಹುದಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.