ಸೋಮವಾರಪೇಟೆ, ಫೆ. 5: ಕರ್ನಾಟಕ ರಕ್ಷಣಾ ವೇದಿಕೆಯ ಸೋಮವಾರಪೇಟೆ ತಾಲೂಕು ಘಟಕದಿಂದ ಇಲ್ಲಿನ ಖಾಸಗಿ ಬಸ್ ನಿಲ್ದಾಣದ ವರ್ಣರಂಜಿತ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ತಾಲೂಕು ಸಮಾವೇಶ ಮತ್ತು ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ನಾಟಿ ಕಿಡ್ಸ್ ತಂಡ ಪ್ರಥಮ ಸ್ಥಾನ ಪಡೆಯಿತು.
ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಅಮೋಘ ನೃತ್ಯ ಪ್ರದರ್ಶಿಸಿದ ನಾಟಿ ಕಿಡ್ಸ್ ತಂಡ ರೂ. 25 ಸಾವಿರ ನಗದು ಬಹುಮಾನದೊಂದಿಗೆ ಅಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಕಿಂಗ್ಸ್ ಆಫ್ ಕೂರ್ಗ್ ತಂಡ 20 ಸಾವಿರ ನಗದಿನೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಇದರೊಂದಿಗೆ ಆ್ಯಟಿಟ್ಯೂಡ್ಸ್ ತಂಡ ತೃತೀಯ (15 ಸಾವಿರ ನಗದು) ಎಕ್ಸ್ ಐ ಎಕ್ಸ್ ತಂಡ ಚತುರ್ಥ (10 ಸಾವಿರ ನಗದು) ಟಿಡಿಎಸ್ ಮತ್ತು ಡ್ರೀಮ್ ಸ್ಟಾರ್ಸ್ ತಂಡಗಳು 5ನೇ ಸ್ಥಾನ (5 ಸಾವಿರ ನಗದು) ಪಡೆದವು.
ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಸ್ಪರ್ಧೆಯಲ್ಲಿ ನಾಟ್ಯಂ ತಂಡ ಪ್ರಥಮ (5 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ) ತನ್ವಿಕಾ ತಂಡ ದ್ವಿತೀಯ(3 ಸಾವಿರ) ಮಯೂರಿ ಮತ್ತು ಅನ್ನದಾತ ತಂಡಗಳು ತೃತೀಯ ಸ್ಥಾನ (2 ಸಾವಿರ ನಗದು) ಪಡೆದವು.
ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ, ಕರವೇ ತಾಲೂಕು ಅಧ್ಯಕ್ಷ ದೀಪಕ್, ಉಪಾಧ್ಯಕ್ಷ ಚಂದ್ರು, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಸುರೇಶ್, ನಗರಾಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ಬೇಟು, ಸಂತೋಷ್, ರವೀಶ್, ರುಬೀನಾ ಸೇರಿದಂತೆ ಪದಾಧಿಕಾರಿಗಳು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.