ಗೋಣಿಕೊಪ್ಪ ವರದಿ, ಫೆ. 4: ವೈಲ್ಡ್ ಲೈಫ್ ಫಸ್ಟ್ ಹಾಗೂ ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆಯ ಟೈಗರ್ ಪಗ್ ಕ್ಲಬ್ ವತಿಯಿಂದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಕಾಡ್ಗಿಚ್ಚುವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಕರಪತ್ರದ ಮೂಲಕ ಕಾಡ್ಗಿಚ್ಚು ನೈಸರ್ಗಿಕವಾಗಿ ಸಂಭವಿಸುವಂತಹದಲ್ಲ ಮಾನವನ ಅಜಾಗಕರೂಕತೆಯಿಂದ ಕಾಡಿಗೆ ಬೆಂಕಿ ಬೀಳುತ್ತದೆ. ಬೆಂಕಿಯಿಂದ ವನ್ಯಜೀವಿಗಳು ಮತ್ತು ಮನುಷ್ಯರ ಮೇಲೆ ಪರಿಣಾಮ ಬೀರುತ್ತದೆ. ಕಾಡಿನ ಸಸ್ಯ ರಾಶಿಗಳು ಮಳೆ ನೀರನ್ನು ಹಿಡಿದಿಟ್ಟು ಅಂತರ್ಜಲ ಮಟ್ಟ ಹೆಚ್ಚಿಸುತ್ತದೆ. ಆದರೆ ಕಾಡ್ಗಿಚ್ಚಿನಿಂದ ನದಿ ಮತ್ತು ಜಲಾಶಯಗಳಲ್ಲಿ ನೀರು ಕಡಿಮೆಯಾಗುತ್ತದೆ. ಅರಣ್ಯ ನಾಶದಿಂದ ಮಳೆ ಕ್ಷೀಣಿಸುತ್ತದೆ ಸೇರಿದಂತೆ ಕಾಡ್ಗಿಚ್ಚಿನಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಯಿತು.
ವನ್ಯಪ್ರೇಮಿ ಬೋಸ್ ಮಾದಪ್ಪ, ಟೈಗರ್ ಪಗ್ ಸಂಚಾಲಕ ಕೃಷ್ಣಚೈತನ್ಯ ಪಾಲ್ಗೊಂಡಿದ್ದರು.