ವೀರಾಜಪೇಟೆ, ಫೆ. 5: ನಗರದ ಕೂರ್ಗ್ ಕೇಬಲ್ ಬಾಯ್ಸ್ ವತಿಯಿಂದ ಅಯೋಜಿಸಿದ ಪುರುಷರ ರಾಜ್ಯ ಮಟ್ಟದ ಕಾಲ್ಚೆಂಡು ಪಂದ್ಯಾಟದ ಅಂತಿಮ ಪಂದ್ಯಾಟದಲ್ಲಿ ನಗರದ ಸುಭಾಶ್ ಫ್ರೆಂಡ್ಸ್ ಕ್ಲಬ್ ತಂಡವು ವಿನ್ನರ್ಸ್ ಹಾಗೂ ಅಮ್ಮತ್ತಿಯ ಮಿಲನ್ ಬಿ ತಂಡ ರನ್ನರ್ಸ್‍ಗೆ ತೃಪ್ತಿಪಟ್ಟುಕೊಂಡಿತು.
ಸುಭಾಶ್ ಫ್ರೆಂಡ್ಸ್ ವೀರಾಜಪೇಟೆ ಮತ್ತು ಅಮ್ಮತ್ತಿ ಮಿಲನ್ ಬಿ. ತಂಡದೊಂದಿಗೆ ನಡೆದ ಫೈನಲ್ ಪಂದ್ಯಾಟದಲ್ಲಿ ಮಿಲನ್ ಬಿ ತಂಡವನ್ನು 3-1 ಗೊಲುಗಳಿಂದ ಪರಭವಗೊಳಿಸಿ ಗೆಲುವು ತನ್ನದಾಗಿಸಿಕೊಂಡಿತು. ಉತ್ತಮ ಗೋಲಿ ನಾಗೇಂದ್ರ, ಸರಣಿ ಪುರುಷೋತ್ತಮ್ಮ ದೋಮಾ, ಉತ್ತಮ ಅಟಗಾರ ರವೀಂದ್ರ, ಉತ್ತಮ ತಂಡ ನೆಹರು ಎಫ್.ಸಿ., ಮುನ್ನಡೆ ಅಟಗಾರ ಈಶ್ವರ್, ಅಲ್ ರೌಂಡರ್ ಅಟಗಾರ ಸತೀಶ್ ಉದಯೋನ್ಮುಖ ಆಟಗಾರ ಅನುತ್, ದಿನದ ಉತ್ತಮ ಆಟಗಾರ ದೋಮಾ ಮತ್ತು ಈಶ್ವರ ಅವರುಗಳು ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರು.
ನಗರದ ತಾಲೂಕು ಮೈದಾನದಲ್ಲಿ 3 ದಿನಗಳಿಂದ ನಡೆದ ಪಂದ್ಯಾಟವು ನಿನ್ನೆ ಸಂಜೆ ಅಂತಿಮ ಪಂದ್ಯಾಟ ದೊಂದಿಗೆ ಮುಕ್ತಾಯಗೊಂಡಿತ್ತು. ಕಾಲ್ವೆಂಡು ಪಂದ್ಯಾಟದ ಸಮಾರೋಪ ಸಮಾರಂಭಕ್ಕೆ ಆಗಮಿಸಿ ಅಂತಿಮ ಪಂದ್ಯಾಟದ ಚೆಂಡು ಒದೆಯುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ನಗರ ಆರಕ್ಷಕ ಠಾಣೆಯ ಠಾಣಾಧಿಕಾರಿ ಸಂತೋಷ್ ಕಶ್ಯಪ್, ಸೋಲು ಗೆಲುವು ಸಾಮಾನ್ಯ. ದೃಢ ಮನಸ್ಸಿನಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿದರೆ ಸದೃಢ ಮೈಕಟ್ಟು ಸಾಧ್ಯ. ಪಂದ್ಯಾಟದಲ್ಲಿ ಹೊಂದಾಣಿಕೆ ಅಟವು ಬಹು ಮುಖ್ಯ ಪಾತ್ರ ವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆಯಂತಹ ಕಾರ್ಯಗಳಿಗೆ ಯುವ ಜನತೆ ಮುಂದಾಗುತ್ತಿರುವದು ಖೇದಕರ ಸಂಗತಿ. ಪಂದ್ಯಾವಳಿಗಳಲ್ಲಿ ಭಾಗವಹಿಸುದರಿಂದ ಮನಸ್ಸಿನಲ್ಲಿರುವ ಖಿನ್ನತೆ ಮಾಯವಾಗಿ ಆತ್ಮಹತ್ಯೆ ಯಂತಹ ದುರ್ಘಟನೆಗಳಿಗೆ ಮಾರು ಹೋಗುವದು ಕಡಿಮೆಯಾಗು ತ್ತದೆ ಎಂದು ಹೇಳಿದರು. ಉದ್ಯಮಿ ಚೋಪಿ ಜೋಸೆಫ್, ಪಟ್ಟಣ ಪಂಚಾಯಿತಿಯ ನಾಮ ನಿದೆರ್Éೀಶಿತ ಸದಸ್ಯ ಡಿ.ಪಿ. ರಾಜೇಶ್ ಪದ್ಮನಾಭ ಮಾತನಾಡಿದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿಯ ನಾಮ ನಿದೆರ್Éೀಶಿತ ಸದಸ್ಯ ಮೊಹಮ್ಮದ್ ರಾಫಿ, ಅರ್.ಎಫ್. ಸಂಸ್ಥೆಯ ಮಾಲೀಕ ಸಲೀಂ ಮತ್ತು ಜುಬೇರ್, ವರ್ತಕರಾದ ಶಾಮೀರ್, ಸಂತೊಷ್ ಮತ್ತು ಟಿ.ಎಸ್. ಶ್ರೀಕಾಂತ್ ಶೆಟ್ಟಿ ಉಪಸ್ಥಿತರಿದ್ದರು.
ಇದೇ ಸಂದರ್ಭ ನಗರದ ಸಾರ್ವಜನಿಕ ಸರ್ಕಾರಿ ಅಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ರಾಮಣ್ಣ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಭಾಶ್ (ಮಹಾದೇವ) ಅವರನ್ನು ಸನ್ಮಾನಿಸಲಾಯಿತು.
ಪಂದ್ಯಾಟದಲ್ಲಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ನೆರೆಯ ಕೇರಳ ರಾಜ್ಯದ ಒಟ್ಟು 35 ತಂಡಗಳು ಭಾಗವಹಿಸಿದ್ದವು.
ಪಂದ್ಯಾಟದಲ್ಲಿ ಅರುಣ್ ಮತ್ತು ಅಶ್ವತ್ ಅವರುಗಳು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.