ಗುಡ್ಡೆಹೊಸೂರು, ಫೆ. 6: ಪಿರಿಯಾಪಟ್ಟಣ ತಾಲೂಕಿನ ಮರೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಈಶ್ವರ ದೇವಸ್ಥಾನದ ಉದ್ಘಾಟನೆ ತಾ. 12 ರಂದು ನಡೆಯಲಿದೆ. ಗ್ರಾಮಸ್ಥರ ಸಹಕಾರ ದೊಂದಿಗೆ ನಿರ್ಮಿಸಿದ ದೇವಾಲಯ ಲೋಕಾರ್ಪಣೆ ಗೊಳ್ಳಲಿದೆ. ಈ ದೇವಾಲಯಕ್ಕೆ ಗುಡ್ಡೆಹೊಸೂರಿನ ತೆಪ್ಪದಕಂಡಿ ಬಳಿ ನಿರ್ಮಿಸಿದ ತೂಗು ಸೇತುವೆ ದಾಟಿದರೆ ಕೇವಲ 1 ಕಿ.ಮೀ. ಮಾತ್ರವಿದ್ದು, ವಿವಿಧ ಪೂಜಾ ಕಾರ್ಯದಲ್ಲಿ ಭಾಗವಹಿಸಲು ದಿಂಡುಗಾಡು ಶ್ರೀ ಅಪ್ಪಾಜಿ ಸ್ವಾಮಿಗಳು, ತೊರೆನೂರು ಮಠದ ಶ್ರೀ ಮಲ್ಲೇಶ ಸ್ವಾಮಿಗಳು, ಮಂಡ್ಯ ಜಿಲ್ಲೆಯ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು ಮತ್ತು ಕಂಪಲಾಪುರದ ಮಹೇಂದ್ರ ಸ್ವಾಮಿಗಳು ಭಾಗವಹಿಸ ಲಿದ್ದಾರೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.