ಮಡಿಕೇರಿ, ಫೆ. 10: ದಲಿತ ಸಮೂಹದ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತಿರುವ ಅನುದಾನ ವನ್ನು ಮಡಿಕೇರಿ ತಾಲೂಕಿನ ಬಲಮುರಿ ಗ್ರಾ.ಪಂ. ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲವೆಂದು ಆರೋಪಿಸಿ ರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಾವಾದದ ರಾಜ್ಯ ಸಂಘಟನಾ ಸಂಚಾಲಕ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಹೆಚ್.ಎಸ್. ವಿಜಯ ಕುಮಾರ್, ಮುಂಬರುವ ಚುನಾವಣೆಯನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಲಮುರಿ ಗ್ರಾಮ ಪಂಚಾಯಿತಿಯ ಕೂಡ ಪರಂಬು ಪೈಸಾರಿಯಲ್ಲಿ ಅಂದಾಜು 42 ದಲಿತ ಕುಟುಂಬಗಳು ವಾಸ ವಾಗಿದ್ದು, ಈ ಕುಟುಂಬಗಳಿಗೆ ಸರ್ಕಾರ ದಿಂದ ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ಯಾವದೇ ಸೌಲಭ್ಯಗಳನ್ನು ಗ್ರಾ.ಪಂ. ಒದಗಿಸಿಲ್ಲ, ಅನುದಾನ ವಿದ್ದರೂ ಬಳಕೆ ಯಾಗುತ್ತಿಲ್ಲವೆಂದು ಆರೋಪಿಸಿದರು. ಸಿಬ್ಬಂದಿಗಳು ದಲಿತರ ಸಂಕಷ್ಟಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದೆ, ಸಬೂಬುಗಳನ್ನು ಹೇಳಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಕಾಲೋನಿಯಲ್ಲಿ ನಿವಾಸಿ ಗಳ ಅಗತ್ಯತೆಗೆ ಪೂರಕ ವಾಗಿ ಅಂಬೇಡ್ಕರ್ ಭವನ ಕೂಡ ಇಲ್ಲವೆಂದು ಆರೋಪಿಸಿದ ಅವರು, ಈ ಬಗ್ಗೆ ಜಿಲ್ಲಾಧಿ ಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಚುನಾವಣೆ ಬಹಿಷ್ಕರಿಸು ವದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ದ.ಸಂ.ಸ. ಸದಸ್ಯರುಗಳಾದ ಬಲಮುರಿ ಗ್ರಾಮದ ತಮ್ಮಯ್ಯ, ರವಿ, ಸುರೇಶ, ಮನು ಹಾಗೂ ಹರೀಶ ಉಪಸ್ಥಿತರಿದ್ದರು.