*ಗೋಣಿಕೊಪ್ಪಲು, ಫೆ. 10: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಬೊಮ್ಮಂಜಿ ಪೈಸಾರಿ ಕಾಂಕ್ರಿಟ್ ರಸ್ತೆಗೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.

ಗ್ರಾಮೀಣ ಭಾಗದ ರಸ್ತೆಗಳು ನಿರ್ಮಾಣವಾಗುವ ಮೂಲಕ ದೇಶ ಪ್ರಗತಿ ಹೊಂದಬೇಕಾಗಿದೆ. ರಸ್ತೆಗಳ ನಿರ್ಮಾಣದಿಂದ ಗ್ರಾಮಗಳ ಅಭಿವೃದ್ಧಿ ಕಾಣಬಹುದು ಎಂದು ಈ ಸಂದರ್ಭ ತಿಳಿಸಿದರು.

ಜಿ.ಪಂ. ಸದಸ್ಯೆ ಅಪ್ಪಂಡೇರಂಡ ಭವ್ಯ, ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಅಣ್ಣಳಮಾಡ ರಾಯ್, ಕಾರ್ಯದರ್ಶಿ ಬೊಟ್ಟಂಗಡ ಗಿರೀಶ್, ಬೊಜ್ಜಂಗಡ ಸಂಪತ್, ಬಿ. ಮಹೇಶ್, ಬೊಟ್ಟಂಗಡ ರಾಜು, ಫೆಡರಲ್ ಸದಸ್ಯ ಮಧು ದೇವಯ್ಯ ಹಾಗೂ ಗ್ರಾಮಸ್ಥರು ಹಾಜರಿದ್ದರು.