ನಾಪೆÇೀಕ್ಲು, ಫೆ. 10 : ಕೊಡಗಿನ ಮೂಲ ನಿವಾಸಿಗಳಾದ ಕುಡಿಯ ಜನಾಂಗದ ಮಹಿಳೆಯರು ಮಕ್ಕಳಾದಿಯಾಗಿ ಹಾಡಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ಪ್ರಸಂಗ ತಡಿಯಂಡ ಮೋಳ್ ಬೆಟ್ಟ ಸಮೀಪದ ಕುಡಿಯರ ಮಂದ್ ನಮ್ಮೆಯಲ್ಲಿ ಕಂಡುಬಂತು.ನಾಲ್ಕುನಾಡು ಪೂಮಲೆ ಸಾಂಸ್ಕøತಿಕ ಸಮಿತಿ ವತಿಯಿಂದ ಯವಕಪಾಡಿ ಗ್ರಾಮದ ತಡಿಯಂಡಮೋಳ್ ತಪ್ಪಲಿನಲ್ಲಿರುವ ಗಿರಿಜನ ಸಮುದಾಯ ಭವನದ ಬಳಿ ಕುಡಿಯರ ಮಂದ್‍ನಲ್ಲಿ ನಡೆದ ಪೂಮಲೆ ಕುಡಿಯ ಜಾನಪದ ಮಂದ್ ನಮ್ಮೆ 2018 ಈ ಎಲ್ಲಾ ಕಾರ್ಯಕ್ರಮಗಳಿಗೆ ವೇದಿಕೆಯಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಸರಕಾರ ಪರಿಸರ ಉಳಿಸಿ, ಕಾಡು ಉಳಿಸಿ ಎಂಬ ಘೋಷಣೆಯನ್ನು ಮಾತ್ರ ಮಾಡುತ್ತಿದೆ. ಆದರೆ ಗಿರಿಜನರು ತಲತಲಾಂತರ ದಿಂದ ಪ್ರಕೃತಿಯನ್ನು ಆರಾಧಿಸಿ ಕೊಂಡು ಕಾಡನ್ನು ರಕ್ಷಿಸಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಕಾಡು ಉಳಿಯಲು ಸಾಧ್ಯವಾಗಿದೆ ಎಂದರು. ಆದರೂ ಗಿರಿಜನರಿಗೆ ವಿವಿಧ ಇಲಾಖೆಗಳಿಂದ ಕಿರುಕುಳ ನೀಡಲಾಗುತ್ತಿರುವದು ವಿಷಾದನೀಯ. ಅವರಿಗೆ ಸರಿಯಾದ ಮೂಲಭೂತ ಸೌಲಭ್ಯವೂ

(ಮೊದಲ ಪುಟದಿಂದ) ಅನೇಕ ಕಾರಣಗಳಿಂದ ದೊರೆಯುತ್ತಿಲ್ಲ ಎಂದರು.

ಕೊಡವ ಮೂಲ ಸಂಸ್ಕøತಿ ಉಳಿಸಿ ಬೆಳೆಸುವಲ್ಲಿಯೂ ಕುಡಿಯ ಜನಾಂಗದವರ ಪಾತ್ರ ಅಪಾರವಾದದ್ದಾಗಿದೆ. ಸರಕಾರದ ಎಲ್ಲಾ ಸೌಲಭ್ಯಗಳನ್ನು ಉತ್ತಮವಾಗಿ ಬಳಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಕಿವಿಮಾತು ಹೇಳಿದರು.

ಕೊಡವ ಸಾಹಿತ್ಯ ಅಕಾಡೆಮಿಯಿಂದ ಸಾಂಸ್ಕøತಿಕವಾಗಿ ಇವರಿಗೆ ಸಹಕರಿಸಬೇಕೆಂದು ವೇದಿಕೆಯಲ್ಲಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೆÇನ್ನಪ್ಪ ಅವರಿಗೆ ಸಲಹೆ

ನೀಡಿದ ಕೆ.ಜಿ.ಬೋಪಯ್ಯ, ಕುಡಿಯ ಜನಾಂಗದ ಉರುಟ್ಟಿಕೊಟ್ಟ್ ಆಟ್ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದೆ. ಅವರ ಪ್ರತಿಭೆ ಬೆಳವಣಿಗೆಗೆ ಹಾಗೂ ಆರ್ಥಿಕ ಮಟ್ಟ ಹೆಚ್ಚಳಕ್ಕೆ ನಾವೆಲ್ಲರೂ ಪಕ್ಷ ಬೇಧ ಮರೆತು ಸಹಕರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಉದ್ಘಾಟಕರಾದ ಕೋಲಿಂದ ಮಲೆ ಕೆ.ಎ.ಬೋಪಯ್ಯ, ಮುಖ್ಯ ಅತಿಥಿಗಳಾದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೆÇನ್ನಪ್ಪ, ಉಪಾಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪ, ಕೊಡಗು ಜಿಲ್ಲಾ ಭಾಷಿಕ ಜನಾಂಗದ ಒಕ್ಕೂಟದ ಅಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕುಂಜಿಲ - ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ ಮಾತನಾಡಿದರು.

ಅಧ್ಯಕ್ಷತೆಯನ್ನು ಕೋಲಿಂದ ಮಲೆಯ ಹಿರಿಯರಾದ ಕೆ.ಎ.ಚಿಣ್ಣಪ್ಪ ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯೆ ಕಬ್ಬೆಮಲೆ ಶಾರದ, ಅಂಗನವಾಡಿ ಕಾರ್ಯಕರ್ತೆ ಶಾಂತಿ ಕೆ.ಕೆ, ಮತ್ತಿತರರು ಇದ್ದರು.

ಈ ಸಂದರ್ಭ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಕೆ.ಕೆ. ಬೋಪಯ್ಯ ಅವರನ್ನು ಸನ್ಮಾನಿಸಲಾಯಿತು.

ನಮ್ಮೆಯ ಅಂಗವಾಗಿ ಉರುಟ್ಟಿಕೊಟ್ಟ್ ಆಟ್, ನಾಟಕ ಪ್ರದರ್ಶನ, ಭರತನಾಟ್ಯ ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಕಿರಣ್ ಮತ್ತು ಸೋಮಯ್ಯ ಪ್ರಾರ್ಥನೆ, ಕುಡಿಯರ ಮುತ್ತಪ್ಪ ಸ್ವಾಗತ, ದಿಲೀಪ್ ಕುಮಾರ್ ನಿರೂಪಿಸಿ, ಬೋಪಯ್ಯ ವಂದಿಸಿದರು. -ಪಿ.ವಿ.ಪ್ರಭಾಕರ್