ಶಶಿ ಸುಬ್ರಮಣಿ

ನಾಪೋಕ್ಲು, ಫೆ. 10: ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿದವರು ಕನಿಷ್ಟ ಒಂದು ವರ್ಷವಾದರೂ ಕಡ್ಡಾಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುವಂತೆ ಸರ್ಕಾರ ಆದೇಶ ಹೊರಡಿಸಿದ್ದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆಯನ್ನು ಸ್ವಲ್ಪವಾದರೂ ನೀಗಿಸಬಹುದೆಂದು ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಚೆಯ್ಯಂಡಾಣೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಟ್ಟ ಪಾರಾಣೆ, ಚೆಯ್ಯಂಡಾಣೆ, ಕಕ್ಕಬೆ ಗ್ರಾ.ಪಂ. ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಚೆಯ್ಯಂಡಾಣೆ ಆರೋಗ್ಯ ಕೇಂದ್ರದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಡಿಕೇರಿ ರಕ್ತನಿಧಿ ಕೇಂದ್ರದ ಅಧಿಕಾರಿ ಡಾ. ಕರುಂಬಯ್ಯ ಮಾಹಿತಿ ನೀಡಿ, ಗರ್ಭಿಣಿ ಸ್ತ್ರೀಯರು, ಕ್ಯಾನ್ಸರ್ ರೋಗಿಗಳು ಮತ್ತು ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ರಕ್ತದ ಅವಶ್ಯಕತೆ ಹೆಚ್ಚಾಗಿದ್ದು, ರಕ್ತದ ಅಗತ್ಯವಿರುವವರ ಸಂಖ್ಯೆ ಇಂದು ಹೆಚ್ಚಾಗಿದೆ. ಆರೋಗ್ಯವಂತ ಪುರುಷರು ಆರು ತಿಂಗಳಿಗೊಮ್ಮೆ ಹಾಗೂ ಸ್ತ್ರೀಯರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಈ ಕುರಿತು ಜನರಲ್ಲಿ ಅರಿವು ಮೂಡಿಸುವಂತಾಗಬೇಕೆಂದು ಹೇಳಿದರು.

ಜಿ.ಪಂ. ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ, ಆರ್‍ಎಂಸಿ ಸದಸ್ಯ ಚೇನಂಡ ಗಿರೀಶ್ ಪೂಣಚ್ಚ, ಗ್ರಾ.ಪಂ. ಸದಸ್ಯರಾದ ಬಿಲಿಯಂಡ್ರ ರತೀಶ್ ಕುಮಾರ್, ಕೋಡಿರ ಪ್ರಸನ್ನ, ತೋಟಂಬೈಲು ಅನಂತ್ ಕುಮಾರ್ ರಕ್ತದಾನ ಮಾಡುವ ಮೂಲಕ ಮಾದರಿಯಗಿ ಜನ ಜಾಗೃತಿ ಮೂಡಿಸಿದರು. ಅಯ್ಯಪ್ಪ ಯುವ ಸಂಘದ 11 ಮಂದಿ ಸದಸ್ಯರು ರಕ್ತದಾನ ಮಾಡಿದರು. ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಸೇರಿದಂತೆ 56 ಮಂದಿ ರಕ್ತ ದಾನದಲ್ಲಿ ಪಾಲ್ಗೊಂಡಿದ್ದರು.

ತಾ.ಪಂ. ಉಪಾಧ್ಯಕ್ಷ ಬೊಳಿÉÉÀಯಡಿರ ಸಂತು ಸುಬ್ರಮಣಿ, ತಾ.ಪಂ. ಸದಸ್ಯೆ ನೆÉರೆÉÀಯಡಮ್ಮಂಡ ಉಮಾಪ್ರಭು, ಕಕ್ಕಬೆ ಗ್ರಾ.ಪಂ. ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ, ಚೆಯ್ಯಂಡಾಣೆ ಗ್ರಾ.ಪಂ. ಅಧ್ಯಕ್ಷೆ ಬೇಬಿ ಶಿವಪ್ಪ, ಉಪಾಧ್ಯಕ್ಷ ರವಿ, ಸದಸ್ಯರಾದ .ಲಲಿತಾ, ಶಾಂತಿ, ಡಾ. ಯಶಶ್ವಿನಿ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಲೀಲಾವತಿ ಪ್ರಾರ್ಥಿಸಿ, ಡಾ. ಪಲ್ಲವಿ ಸ್ವಾಗತಿಸಿ, ಪ್ರಸನ್ನ ಕುಮಾರಿ ನಿರೂಪಿಸಿ, ಕನಕ ವಂದಿಸಿದರು.