ಮಡಿಕೇರಿ, ಫೆ. 10: ನಾಪೋಕ್ಲು ಸಮೀಪದ ಚೆರಿಯಪರಂಬು ನುಸ್ರತುಲ್ ಅನಾಂ ಇಪ್ಲುಲ್ ಖುರ್‍ಆನ್ ಸ್ಟಡಿ ಸೆಂಟರ್‍ನಲ್ಲಿ ತಾ. 11 ರಂದು (ಇಂದು) ಸಂಜೆ 7 ಗಂಟೆಗೆ ನಾರಿಯತ್ ಸ್ವಲಾತ್ ಮಜ್ಲಿಸ್ ನಡೆಯಲಿದೆ.ಎಮ್ಮೆಮಾಡಿನ ಸೈಯದ್ ಅಜೀಜ್ ತಂಙಳ್ ನೇತೃತ್ವ ವಹಿಸಲಿದ್ದು, ಪ್ರೊ. ಅಹ್ಮದ್ ಕಬೀರ್ ಇಮಮಿ, ಧರ್ಮಗುರು ಝೈನುದ್ದೀನ್ ಸಅದಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಪದಾಧಿಕಾರಿ ಪಿ.ಎ. ಹಾರಿಸ್ ತಿಳಿಸಿದ್ದಾರೆ.