ಚೆಟ್ಟಳ್ಳಿ, ಫೆ. 10: ಚೆಟ್ಟಳ್ಳಿಯಿಂದ ಮರಗೋಡು ರಸ್ತೆ ಅಭಿವೃದ್ಧಿಗೆ ತಾಲೂಕು ಪಂಚಾಯಿತಿ ಸದಸ್ಯರ ನಿಧಿಯಿಂದ ರೂ. 1.5 ಲಕ್ಷ ಬಿಡುಗಡೆ ಯಾಗಿದ್ದು, ಪ್ರಗತಿ ಯಲ್ಲಿರುವ ರಸ್ತೆ ಕಾಮಗಾರಿಯನ್ನು ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಪರಿಶೀಲಿಸಿದರು. ಬಟ್ಟೀರ ಕುಟುಂಬಸ್ಥರಾದ ಬಟ್ಟೀರ ವೇಣು ನಾಚಪ್ಪ, ಬಟ್ಟೀರ ಕಾವೇರಪ್ಪ ಹಾಜರಿದ್ದರು.