ಮಡಿಕೇರಿ, ಫೆ. 10 : ಕಡಗದಾಳು ಗ್ರಾಮದ ಸಮೀಪ ಇರುವ ಶ್ರೀ ಬೊಟ್ಲಪ್ಪೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ನಡೆಯುವ ವಾರ್ಷಿಕ ಮಹಾಪೂಜೆ ತಾ. 13 ಮತ್ತು 14 ರಂದು ನಡೆಯಲಿದೆ.

* ಸಿದ್ದಾಪುರ: ವೀರಾಜಪೇಟೆಯ ಜೈನರ ಬೀದಿಯಲ್ಲಿರುವ ಶ್ರೀ ಬಸವೇಶ್ವರ-ಗೌರಿ ದೇವಾಲಯದಲ್ಲಿ ತಾ. 13 ರಂದು ಮಹಾ ಶಿವರಾತ್ರಿ ಉತ್ಸವ ವಿವಿಧ ಪೂಜೆ ಕೈಂಕರ್ಯಗಳೊಂದಿಗೆ ನಡೆಯಲಿದೆ.

ಕುಶಾಲನಗರ: ಕುಶಾಲನಗರ ದೇವಾಲಯಗಳ ಸಹಯೋಗದೊಂದಿಗೆ ಸ್ಥಳೀಯ ಮಹಾಗಣಪತಿ ದೇವಾಲಯದ ಆವರಣದಲ್ಲಿ ತಾ. 13 ರಂದು ಮಹಾ ಶಿವರಾತ್ರಿ ಆಚರಣೆ ನಡೆಯಲಿದೆ ಎಂದು ದೇವಾಲಯ ಒಕ್ಕೂಟದ ಅಧ್ಯಕ್ಷರಾದ ಎಂ.ಕೆ. ದಿನೇಶ್ ತಿಳಿಸಿದ್ದಾರೆ.

ಶಿವರಾತ್ರಿ ಅಂಗವಾಗಿ ಸಂಜೆ 6 ರಿಂದ ಬೆಳಿಗ್ಗೆ 6 ರತನಕ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಆರ್ಟ್ ಆಫ್ ಲಿವಿಂಗ್ ಖ್ಯಾತ ಕಲಾವಿದರಾದ ಸುದರ್ಶನ್ ಮತ್ತು ಬಳಗದಿಂದ ಮತ್ತು ಸ್ಥಳೀಯ ಮಹಿಳಾ ಭಜನಾ ಮಂಡಳಿಗಳಿಂದ ಭಜನೆ, ಭಕ್ತಿ ಪ್ರಧಾನ ನೃತ್ಯ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.

ಕುಶಾಲನಗರ ಮುಳ್ಳುಸೋಗೆ ಗ್ರಾಮದ ಬಯಲು ಬಸವೇಶ್ವರ ಬಡಾವಣೆ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ 9ನೇ ವರ್ಷದ ಮಹಾ ಶಿವರಾತ್ರಿ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬಡಾವಣೆಯ ಬಯಲು ಬಸವೇಶ್ವರ ದೇವಸ್ತಾನ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು ಅಂದು ಬೆಳಿಗ್ಗೆ 10 ಗಂಟೆಗೆ ಆಟೋಟ ಸ್ಪರ್ಧೆ, ಮಧ್ಯಾಹ್ನ 12 ಗಂಟೆಗೆ ಸಮಿತಿಯ ಮಹಾಸಭೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಬಿ.ಕೆ. ಸುದೀಪ್ ಕುಮಾರ್ ತಿಳಿಸಿದ್ದಾರೆ.

ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಪಾಲ್ಗೊಳ್ಳುವರು. ಮಹಾ ಶಿವರಾತ್ರಿ ಕಾರ್ಯಕ್ರಮ ಅಂಗವಾಗಿ ಬಾಲಕ-ಬಾಲಕಿಯರಿಗೆ ಆಟೋಟ ಸ್ಪರ್ಧೆ ಮಹಿಳೆಯರಿಗೆ, ಪುರುಷರಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಛದ್ಮವೇಶ, ಭಕ್ತಿಗೀತೆ ಗಾಯನ, ಜಾನಪದ ನೃತ್ಯ, ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸುದೀಪ್ ಕುಮಾರ್ ತಿಳಿಸಿದ್ದಾರೆ.

ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಯ ಬಸವೇಶ್ವರ ಯುವಕ ಸಂಘದ ಆಶ್ರಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ 6ನೇ ವರ್ಷದ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ‘ಬಸವೇಶ್ವರ ಕಪ್’ ತಾ. 11 ರಿಂದ 3 ದಿನಗಳ ಕಾಲ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಹೆಚ್. ಮಣಿ ತಿಳಿಸಿದ್ದಾರೆ.

ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿಯಂದು 16ನೇ ವಾರ್ಷಿಕ ಲಕ್ಷದೀಪೋತ್ಸವ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9.30 ಕ್ಕೆ ಅಭಿಷೇಕ, ಸಂಜೆ 7 ಗಂಟೆಗೆ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನ ಟ್ರಸ್ಟ್ ಪ್ರಕಟಣೆ ತಿಳಿಸಿದೆ.