ನಾಪೆÇೀಕ್ಲು, ಫೆ. 10: ಉರೂಸ್ ಕಾರ್ಯಕ್ರಮಗಳು ಪರಸ್ಪರ ಐಕ್ಯತೆ, ಪ್ರೀತಿ, ಸಹಬಾಳ್ವೆಯ ಸಂದೇಶವನ್ನು ಸಾರುತ್ತಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು.

ಕೊಳಕೇರಿ ಸುನ್ನಿ ಮುಸ್ಲಿಂ ಜಮಾಅತ್‍ನಲ್ಲಿ ನಡೆದ ವಾರ್ಷಿಕ ಉರೂಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಸ್ಲಾಂ ಧರ್ಮದ ಪವಿತ್ರವಾದ ನಮಾಜ್, ಜಕತ್, ರೋಜ, ಕಲ್ಮಾ ಮತ್ತು ಹಜ್ ಎಂಬ ಐದು ಕಂಬಗಳು ಮುಸಲ್ಮಾನರು ಮಾತ್ರವಲ್ಲದೇ, ಇಡೀ ಜಗತ್ತಿನಲ್ಲಿ ಹೆಸರುಗಳಿಸಿದೆ.

ಮಾನವೀಯತೆಯನ್ನು, ಕುಲದ ಬಂಧುತ್ವವನ್ನು ಸಾರತಕ್ಕಂತಹ ಪವಿತ್ರ ಧರ್ಮ ಈ ಕಂಬಗಳಲ್ಲಿದೆ. ಅದನ್ನು ಜನ ಸಾಮಾನ್ಯರು ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಿ ಅರ್ಥಮಾಡಿ ಕೊಳ್ಳಬೇಕು. ಆಗ ಮುಸ್ಲಿಂ ವಿಶ್ವಕ್ಕೆ ಶಾಂತಿ ಸಾರುವ ಧರ್ಮ ಎಂದು ತಿಳಿಯುತ್ತದೆ ಎಂದರು. ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಮೈದುಕುಟ್ಟಿ ಹಾಜಿ ವಹಿಸಿದ್ದರು. ವೇದಿಕೆಯಲ್ಲಿ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ. ಮನ್ಸೂರ್ ಅಲಿ, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್ ಖಾನ್, ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಹೆಚ್.ಎಸ್. ಮತೀನ್, ಮಹಾ ಪ್ರಧಾನ ಕಾರ್ಯದರ್ಶಿ ಕೆ.ಜೆ. ಜಾಫರ್, ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸದಸ್ಯ ಹಾರೀಸ್, ಮಾಜಿ ಉಪಾಧ್ಯಕ್ಷ ಟಿ.ಹೆಚ್. ಅಹಮದ್, ಜಮಾಅತ್ ಕಾರ್ಯದರ್ಶಿ ಷಂಶುದ್ದೀನ್, ಧಾರ್ಮಿಕ ಮುಖಂಡರು ಇದ್ದರು.