*ಗೋಣಿಕೊಪ್ಪಲು, ಫೆ. 11 : ಡೆಪ್ಯೂಟಿ ಡೈರೆಕ್ಟರ್ ಜನರಲ್ ಆಪ್ ಎನ್‍ಸಿಸಿ ಅವರು ನೀಡುವ ರಾಜ್ಯಮಟ್ಟದ ಪ್ರಶಸ್ತಿಗೆ ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯ ಎನ್‍ಸಿಸಿ ಅಧಿಕಾರಿ ಬಿ.ಎಂ.ಗಣೇಶ್ ಭಾಜನರಾಗಿದ್ದಾರೆ. ಬೆಂಗಳೂರಿನ ಆರ್‍ವಿ ಮಹಿಳಾ ಕಾಲೇಜಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗಣೇಶ್ ಅವರಿಗೆ ಕರ್ನಾಟಕ - ಗೋವಾ ಎನ್‍ಸಿಸಿ ಬೆಟಾಲಿನ್ ನ ಬ್ರಿಗೇಡಿಯರ್ ಪೂರ್ವಿಮತ್ ಪ್ರಶಸ್ತಿ ನೀಡಿ ಗೌರವಿಸಿದರು.