ಸುಂಟಿಕೊಪ್ಪ, ಫೆ. 14: ಇಂದಿನ ಮಕ್ಕಳನ್ನು ಮೊಬೈಲ್-ಟಿವಿಯಿಂದ ದೂರವಿರಿಸಿ ಇಲ್ಲದಿದ್ದಲ್ಲಿ ಮಕ್ಕಳ ಆರೋಗ್ಯ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಎಂದು ಕೊಡಗರಹಳ್ಳಿ ಶಾಂತಿನಿಕೇತನ ಶಾಲೆಯ ಮುಖ್ಯ ಶಿಕ್ಷಕಿ ಮೇರಿ ಫಾತಿಮ ಅಭಿಪ್ರಾಯಪಟ್ಟರು.
ಇಲ್ಲಿನ ಜ್ಞಾನಧಾರಾ ಶಿಶು ವಿಹಾರದಲ್ಲಿ ನಡೆದ ಶಾಲಾ ವಾರ್ಷಿಕೋತ್ಸದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೆಳೆಯುವ ಹಂತದಲ್ಲೇ ಮಕ್ಕಳನ್ನು ಮೊಬೈಲ್ ಟಿವಿಯಿಂದ ದೂರವಿರಿಸಿ ಯಾವದೇ ಕೆಟ್ಟ ಭಾವನೆಗಳು ಮೂಡದಂತೆ ಜಾಗೃತಿ ವಹಿಸಬೇಕೆಂದು ಅವರು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಈಶ ಮಾತನಾಡಿ, ಯಾವದೇ ಕೆಟ್ಟ ಭಾವನೆಗಳು ಮೂಡದಂತೆ ಮನೆಯ ಪರಿಸರದಲ್ಲಿ ಪೋಷಕರು ನಡೆದುಕೊಳ್ಳುವ ರೀತಿಯ ಮೇಲೆ ಮಗುವಿನ ಭವಿಷ್ಯ ರೂಪಿತವಾಗಿರುತ್ತದೆ ಎಂದರು.
ಪುಟಾಣಿ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಶು ವಿಹಾರದ ಅಧ್ಯಕ್ಷೆ ಲೀಲಾ ಮೇದಪ್ಪ ವಹಿಸಿದ್ದರು. ವೇದಿಕೆಯಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ. ಸೋಮಚಂದ್ರ, ವಿಎಸ್‍ಎಸ್‍ಎನ್ ಬ್ಯಾಂಕ್ ಅಧ್ಯಕ್ಷ ಎನ್.ಸಿ. ಪೊನ್ನಪ್ಪ, ದೇವಿ ಕಾಫಿ ತೋಟದ ಚೋಟ್ಟೆರ ಶಾರದಾ ಮೇದಪ್ಪ ಉಪಸ್ಥಿತರಿದ್ದರು. ಟ್ರಸ್ಟ್ ಉಪಾಧ್ಯಕ್ಷೆ ಗಿರಿಜಾ ಉದಯ ಕುಮಾರ್, ಮುಖ್ಯ ಶಿಕ್ಷಕಿ ಶಾಂತಿ ದೇವರಾಜ್, ನಿರ್ದೇಶಕರಾದ ಸರೋಜಿನಿ, ಪಾರ್ವತಿ, ಕೊಡಗರಹಳ್ಳಿ ಪ್ರೌಢಶಾಲೆಯ ನಿವೃತ ಮುಖ್ಯ ಶಿಕ್ಷಕಿ ಸಾವಿತ್ರಿ ಶಿಕ್ಷಕಿ, ಪೂಜಾ ಅಶೋಕ್ ಶೇಟ್ ಪೋಷಕರು ಇದ್ದರು.