ಕುಶಾಲನಗರ, ಫೆ. 14: ಹಾರಂಗಿಅಣೆಕಟ್ಟೆಯಿಂದ ನದಿಗೆ ಮಂಗಳವಾರ 400 ಕ್ಯೂಸೆಕ್ ನೀರು ಹರಿಸಲಾಗಿದೆ. ನದಿ ಪಾತ್ರದಜನತೆಗೆಕುಡಿಯಲು ನೀರು ಹರಿಸಲು ಸರಕಾರ ಸೂಚನೆ ನೀಡಿರುವದಾಗಿ ಅಣೆಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ. ಜಲಾಶಯದಲ್ಲಿ ಪ್ರಸಕ್ತ 2 ಟಿಎಂಸಿ ಪ್ರಮಾಣದ ನೀರು ಸಂಗ್ರಹವಿದ್ದು ಜನ ಜಾನುವಾರುಗಳ ಅವಶ್ಯಕತೆಗಳಿಗೆ ಅನುಗುಣವಾಗಿ 1 ದಿನದಅವಧಿಗೆ ನದಿಗೆ ನೀರು ಹರಿಸಲಾಗುತ್ತಿದೆ ಎಂದು ಅಣೆಕಟ್ಟೆ ಅಧಿಕಾರಿ ನಾಗರಾಜು ತಿಳಿಸಿದ್ದಾರೆ.

ಜಲಾಶಯದ ತಳಮಟ್ಟದ ಗೇಟ್ ಮೂಲಕ ಹಾಗೂ ಇಡಿಸಿಎಲ್ ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲಕ ನದಿಗೆ ನೀರು ಹರಿಸಲಾಗಿದೆ.