*ಗೋಣಿಕೊಪ್ಪಲು ವರದಿ, ಫೆ. 14 : ಕೊಟ್ಟಗೇರಿ ಗ್ರಾಮದಲ್ಲಿ ಹುಲಿ ಧಾಳಿಗೆ ಗೂಳಿ ಯೊಂದು ಗಂಭೀರ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿದೆ. ಅಲ್ಲಿನ ಕೊಪ್ಪಲು ನಿವಾಸಿ, ರಘು ಶಿವನಂಜಯ್ಯ ಎಂಬವರು ಮೇಯಲು ಬಿಟ್ಟಿದ್ದ ಗೂಳಿಯ ಮೇಲೆ ಹುಲಿ ಧಾಳಿ ನಡೆಸಿ ದೇಹದ ಸ್ವಲ್ಪ ಭಾಗವನ್ನು ತಿಂದು ಹಾಕಿದೆ.
ಹುಲಿ ಹಾಗೂ ಗೂಳಿಯ ನಡುವೆ ಕಾದಾಟ ನಡೆದಿದ್ದು, ಗೂಳಿಯ ಕೋಡಿನಲ್ಲಿ ಹುಲಿಯ ಕೂದಲು ಪತ್ತೆಯಾಗಿದೆ. ಸ್ಥಳಕ್ಕೆ ತಿತಿಮತಿ, ಪೆÇನ್ನಂಪೇಟೆ ಆರ್‍ಆರ್‍ಟಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.