ಸೋಮವಾರಪೇಟೆ, ಫೆ. 15: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾ. 4 ರಂದು ಪೂರ್ವಾಹ್ನ 10.30 ಗಂಟೆಗೆ ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮನ ಕೆರೆ ಸಮೀಪ ಕವಿಗೋಷ್ಠಿ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಕ.ಸಾ.ಪ. ಅಧ್ಯಕ್ಷ ಎಸ್.ಡಿ. ವಿಜೇತ್ ತಿಳಿಸಿದ್ದಾರೆ. ಕಾರ್ಯಕ್ರಮವನ್ನು ಹಿರಿಯ ಲೇಖಕ ಕುಮಾರಪ್ಪ ಉದ್ಘಾಟಿಸಲಿದ್ದು, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಲೋಕೇಶ್ ಸಾಗರ್, ನಿವೃತ್ತ ಶಿಕ್ಷಕ ಡಿ.ಜಿ. ಬೊಮ್ಮಯ್ಯ, ನಿವೃತ್ತ ಸೈನಿಕ ಶೇಖರ್, ಸಾಹಿತಿ ವೈಲೇಶ್ ಭಾಗವಹಿಸಲಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಶಿಕ್ಷಕಿ ರಾಣಿ ರವೀಂದ್ರ ವಹಿಸಲಿದ್ದು, ಕಸಾಪ ಕೋಶಾಧಿಕಾರಿ ಎಸ್.ಎ. ಮುರಳೀಧರ್, ಜಿಲ್ಲಾ ಸಮಿತಿ ಸದಸ್ಯ ಎಸ್.ಪಿ. ಪ್ರಸನ್ನ, ಸುಮಾ ಸುದೀಪ್, ಕವನ್ ಕಾರ್ಯಪ್ಪ, ನಾಗರಾಜಶೆಟ್ಟಿ, ಅಶ್ವಥ್ ಕುಮಾರ್, ಬಿಇಓ ನಾಗರಾಜಯ್ಯ ಆಗಮಿಸಲಿದ್ದಾರೆ. ಇದೇ ಸಂದರ್ಭ ಎಂ.ಕೆ. ಈರಪ್ಪ ಹಾಗೂ ಡಿ.ಈ. ಹೂವಮ್ಮ ಅವರುಗಳನ್ನು ಸನ್ಮಾನಿಸಲಾಗುವದು ಎಂದು ವಿಜೇತ್ ತಿಳಿಸಿದ್ದಾರೆ. ಪ್ರೇಮ ಕಾವ್ಯವನ್ನು ಹೊರತು ಪಡಿಸಿದ ಕವನಗಳನ್ನು ತಾ. 25 ರೊಳಗೆ ಕ.ಸಾ.ಪ. ಸದಸ್ಯರುಗಳಾದ ನ.ಲ. ವಿಜಯ (ಮೊ:8762983849) ಆಶಾ ಪುಟ್ಟರಾಜು (ಮೊ: 9611743369) ಅವರುಗಳಿಗೆ ಕಳುಹಿಸಿಕೊಡಬೇಕೆಂದು ತಿಳಿಸಿದ್ದಾರೆ.