ಆಲೂರು-ಸಿದ್ದಾಪುರ, ಫೆ. 15: ಆಲೂರು-ಸಿದ್ದಾಪುರ ವ್ಯಾಪ್ತಿಯ ಅರೆಭಾಷೆ ಗೌಡ ಸಮಾಜದ ಉದ್ಘಾಟನಾ ಕಾರ್ಯಕ್ರಮ ತಾ. 18 ರಂದು ಸಂಗಯ್ಯನಪುರ ಗ್ರಾಮದಲ್ಲಿ ನಡೆಯಲಿದೆ ಎಂದು ಆಲೂರು-ಸಿದ್ದಾಪುರ ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಜಿ. ಗಿರೀಶ್ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರಪೇಟೆ ತಾಲೂಕಿನ ಆಲೂರು-ಸಿದ್ದಾಪುರ, ನೇರುಗಳಲೆ ಗ್ರಾ.ಪಂ.ಗಳು ಸೇರಿದಂತೆ ತಾಲೂಕಿನ 6 ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾವಿರಾರು ಅರೆಭಾಷೆ ಗೌಡ ಜನಾಂಗದ ಕುಟುಂಬ ಬಾಂಧವರು ಹಲವಾರು ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಆದರೆ ಇಂದಿನ ಯುವ ಜನಾಂಗಕ್ಕೆ ಅರೆಭಾಷೆ, ಸಂಸ್ಕøತಿ, ಆಚಾರ-ವಿಚಾರ, ಸಂಪ್ರದಾಯ, ಪದ್ಧತಿ ಮುಂತಾದ ವೈಶಿಷ್ಟ್ಯತೆಯ ಅರಿವು ಇರುವದಿಲ್ಲ. ಈ ನಿಟ್ಟಿನಲ್ಲಿ ಅರೆಭಾಷೆ ಗೌಡ ಸಮಾಜ ಸಾಂಸ್ಕøತಿಕ, ಶೈಕ್ಷಣಿಕ, ಆರೋಗ್ಯ, ರಾಜಕೀಯ ಇನ್ನು ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುವ ಬಗ್ಗೆ ಹಾಗೂ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುವ ಉದ್ದೇಶದಿಂದ 6 ಗ್ರಾಮಗಳನ್ನು ಒಳಗೊಂಡ ಅರೆಭಾಷೆ ಗೌಡ ಜನಾಂಗದ ಬಾಂಧವರು ಸೇರಿಕೊಂಡು

(ಮೊದಲ ಪುಟದಿಂದ) ಆಲೂರು-ಸಿದ್ದಾಪುರದಲ್ಲಿ ಅರೆಭಾಷೆ ಗೌಡ ಸಮಾಜ ಎಂಬ ಹೆಸರಿನಲ್ಲಿ ನೋಂದಾಯಿಸುವ ಮೂಲಕ ಸಮಾಜವನ್ನು ಸ್ಥಾಪಿಸಲಾಗಿದೆ ಎಂದರು.

ಅರೆಭಾಷೆ ಗೌಡ ಸಮಾಜದ ಕಾರ್ಯದರ್ಶಿ ಕುಯ್ಯಮುಡಿ ಜಯಕುಮಾರ್ ಮಾಹಿತಿ ನೀಡಿ, ತಾ. 18 ರಂದು ಸಮಾರಂಭದಲ್ಲಿ ಅಧ್ಯಕ್ಷ ದೇವಾಯಿರ ಗಿರೀಶ್ ಅಧ್ಯಕ್ಷತೆ ವಹಿಸಲಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕೇಂದ್ರ ಸಚಿವ ದೇವರಗುಂಡ ವಿ. ಸದಾನಂದಗೌಡ, ವೀರಾಜಪೇಟೆ ಕ್ಷೇತ್ರ ಶಾಸಕ ಕೊಂಬಾರನ ಜಿ. ಬೋಪಯ್ಯ, ರಾಜ್ಯ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಾಲ್ತಾಡ್ ಸಿ. ಜಯರಾಮ್ ಮುಂತಾದವರು ಭಾಗವಹಿಸುತ್ತಾರೆ ಎಂದರು.

ತಾ. 18 ರಂದು ನೆರವೇರಲಿರುವ ಉದ್ಘಾಟನಾ ಸಮಾರಂಭದ ಪ್ರಯುಕ್ತ ಅಂದು ಬೆಳಿಗ್ಗೆ 8 ಗಂಟೆಗೆ ಸಂಗಯ್ಯನಪುರ ಸಮೀಪದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವತೆಗೆ ಪೂಜೆ ನೆರವೇರಿಸಲಾಗು ವದು. 8.30 ಗಂಟೆಯಿಂದ ಮೆರವಣಿಗೆ ನಡೆಯಲಿದೆ ಎಂದರು

ಗೋಷ್ಠಿಯಲ್ಲಿ ಅರೆಭಾಷೆ ಗೌಡ ಸಮಾಜದ ಪ್ರಮುಖರು ಹಾಜರಿದ್ದರು.