ಶ್ರೀಮಂಗಲ, ಫೆ. 15: ಕೊಡಗಿನ ಮೂಲಕ ಕೇರಳಕ್ಕೆ ಹಲವು ರೈಲು ಮಾರ್ಗ ರೂಪಿಸುವದನ್ನು ವಿರೋಧಿಸಿ ತಾ. 18 ರಂದು ಮೈಸೂರಿನಲ್ಲಿ ನಡೆಸಲು ಉದ್ದೇಶಿಸಿರುವ ಬೃಹತ್ ಪ್ರತಿಭಟನಾ ರ್ಯಾಲಿಗೆ ಈಗಾಗಲೇ ಸಾಕಷ್ಟು ಸಿದ್ಧತೆಗಳನ್ನು ನಡೆಸಲಾಗಿದೆ. ರ್ಯಾಲಿಗೆ ಜನರು ತೆರಳಲು ಇದುವರೆಗೆ 72 ಬಸ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಸ್ವಯಂಪ್ರೇರಿತರಾಗಿ ನೂರಾರೂ ಖಾಸಗಿ ವಾಹನಗಳಲ್ಲಿಯೂ ಜನರು ಆಗಮಿಸಲಿದ್ದು, ಬೆಂಗಳೂರು, ಮೈಸೂರು, ಮಂಡ್ಯದಿಂದಲೂ ಜನರು ಆಗಮಿಸಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕೊಡಗು ರೈಲ್ವೆ ವಿರೋಧಿ ಹೋರಾಟ ವೇದಿಕೆಯ ಪ್ರಮುಖರಾದ ಹಾಗೂ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ತಿಳಿಸಿದ್ದಾರೆ.ಈ ಬಗ್ಗೆ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಪೂರ್ವಭಾವಿ ಸಭೆ ನಡೆಸಿ ಪ್ರತಿಭಟನಾ ರ್ಯಾಲಿಗೆ ಜಿಲ್ಲೆಯದಾದ್ಯಂತ ಕೊಡಗಿನ ಮೇಲೆ ಕಾಳಜಿ ಹೊಂದಿರುವ ಹೆಚ್ಚಿನ ಜನರು ನಿರೀಕ್ಷೆಗೂ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.

ರೈಲ್ವೆ ವಿರೋಧಿ ಹೋರಾಟ ವೇದಿಕೆಯ ಪ್ರಮುಖರಾದ ಮಾಚಿಮಾಡ ಎಂ ರವೀಂದ್ರ ಮಾತನಾಡಿ ತಾ. 18 ರಂದು ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಮೈಸೂರಿನ ಜೆ.ಕೆ ಮೈದಾನದಲ್ಲಿ ಆಯೋಜಿಸಲಾಗಿತ್ತು. ಆದರೆ, ಪ್ರತಿಭಟನೆಯಲ್ಲಿ ನಿರೀಕ್ಷೆಗೂ ಮೀರಿ ಜನರು ಪಾಲ್ಗೊಳ್ಳುತ್ತಿರುವದು ಹಾಗೂ ಬಸ್ ಸೇರಿ ನೂರಾರೂ ವಾಹನಗಳಿಗೆ ನಿಲುಗಡೆಗೆ ಸುಗಮ ವ್ಯವಸ್ಥೆ ಕಲ್ಪಿಸಲು ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದಸರಾ ವಸ್ತು ಪ್ರದರ್ಶನ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದರು.

ದ.ಕೊಡಗಿನ ಮೂಲಕ ಮೈಸೂರಿನ ಪ್ರತಿಭಟನೆಗೆ ಬರುವ ವಾಹನಗಳು ನಿಗದಿತ ಸ್ಥಳದಿಂದ ಅಂದು ಬೆಳಿಗ್ಗೆ 7 ಗಂಟೆಗೆ ಹೊರಡಲಿದ್ದು, 8 ಗಂಟೆಗೆ ಕೊಡಗಿನ ಗಡಿ ಭಾಗ ತಿತಿಮತಿಯ ಆನೆ ಚೌಕೂರಿನ ರಸ್ತೆ ಬದಿಯಲ್ಲಿ ಸರದಿ ಸಾಲಾಗಿ ನಿಲುಗಡೆ ಮಾಡಿ ಎಲ್ಲಾ ಬಸುಗಳು ಬಂದು ಸೇರಿದ ನಂತರ ಹೊರಡುವ ವ್ಯವಸ್ಥೆ ಮಾಡಲಾಗಿದೆ. ಉ.ಕೊಡಗಿನ ಮೂಲಕ ಬರುವ ಬಸ್‍ಗಳು ಕುಶಾಲನಗರದ ಮೂಲಕ ಮೈಸೂರಿಗೆ ಬರಲಿವೆ. ಎಲ್ಲಾ ಬಸ್ ಹಾಗೂ ವಾಹನಗಳಿಗೆ ದಸರಾ ವಸ್ತು ಪ್ರದರ್ಶನ ಮೈದಾನಲ್ಲಿ ನಿಲುಗಡೆಗೆ ವ್ಯವಸ್ಥೆ

(ಮೊದಲ ಪುಟದಿಂದ) ಆಲೂರು-ಸಿದ್ದಾಪುರದಲ್ಲಿ ಅರೆಭಾಷೆ ಗೌಡ ಸಮಾಜ ಎಂಬ ಹೆಸರಿನಲ್ಲಿ ನೋಂದಾಯಿಸುವ ಮೂಲಕ ಸಮಾಜವನ್ನು ಸ್ಥಾಪಿಸಲಾಗಿದೆ ಎಂದರು.

ಅರೆಭಾಷೆ ಗೌಡ ಸಮಾಜದ ಕಾರ್ಯದರ್ಶಿ ಕುಯ್ಯಮುಡಿ ಜಯಕುಮಾರ್ ಮಾಹಿತಿ ನೀಡಿ, ತಾ. 18 ರಂದು ಸಮಾರಂಭದಲ್ಲಿ ಅಧ್ಯಕ್ಷ ದೇವಾಯಿರ ಗಿರೀಶ್ ಅಧ್ಯಕ್ಷತೆ ವಹಿಸಲಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕೇಂದ್ರ ಸಚಿವ ದೇವರಗುಂಡ ವಿ. ಸದಾನಂದಗೌಡ, ವೀರಾಜಪೇಟೆ ಕ್ಷೇತ್ರ ಶಾಸಕ ಕೊಂಬಾರನ ಜಿ. ಬೋಪಯ್ಯ, ರಾಜ್ಯ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಾಲ್ತಾಡ್ ಸಿ. ಜಯರಾಮ್ ಮುಂತಾದವರು ಭಾಗವಹಿಸುತ್ತಾರೆ ಎಂದರು.

ತಾ. 18 ರಂದು ನೆರವೇರಲಿರುವ ಉದ್ಘಾಟನಾ ಸಮಾರಂಭದ ಪ್ರಯುಕ್ತ ಅಂದು ಬೆಳಿಗ್ಗೆ 8 ಗಂಟೆಗೆ ಸಂಗಯ್ಯನಪುರ ಸಮೀಪದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವತೆಗೆ ಪೂಜೆ ನೆರವೇರಿಸಲಾಗು ವದು. 8.30 ಗಂಟೆಯಿಂದ ಮೆರವಣಿಗೆ ನಡೆಯಲಿದೆ ಎಂದರು

ಗೋಷ್ಠಿಯಲ್ಲಿ ಅರೆಭಾಷೆ ಗೌಡ ಸಮಾಜದ ಪ್ರಮುಖರು ಹಾಜರಿದ್ದರು.