ಮಡಿಕೇರಿ, ಫೆ. 15: 12ನೇ ಶತಮಾನದಲ್ಲಿ ದಲಿತ ವಚನಕಾರರು ಮೆಲುಕೀಳು ಎಂಬ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿದ ಮಹಾನ್ ಶರಣರು. ಎಲ್ಲರೂ ಸಮಾನರು ಎಂಬ ಭಾವನೆಯನ್ನು ಜನರಲ್ಲಿ ಮೂಡಿಸಿದ ಶರಣರ ಸಾಧನೆ ಅಪಾರವಾದದ್ದು ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ದಲಿತ ವಚನಕಾರರ ಮತ್ತು ಶ್ರೀ ಸೇವಾಲಾಲ್ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹರಳಯ್ಯ ತನ್ನ ಮತ್ತು ಹೆಂಡತಿಯ ಎಡ ತೊಡೆಯ ಚರ್ಮದಲ್ಲಿ ಬಸವಣ್ಣನವರಿಗೆ ಪಾದುಕೆಯನ್ನು ಮಾಡಿದವರು. ಬಸವಣ್ಣನವರ ಮೇಲೆ ಹರಳಯ್ಯ ಅಪಾರವಾದ ಗೌರವನ್ನು ಹೊಂದಿದ್ದರು ಹಾಗೆಯೇ ಮಾನವೀಯ ಮೌಲ್ಯವನ್ನು ಹೊಂದಿದವರು ಹರಳಯ್ಯ ಎಂದು ತಿಳಿಸಿದರು.

ಬಸವಣ್ಣನ ಕಾಲಘಟ್ಟದಲ್ಲಿ ಮಾದರ ಚನ್ನಯ್ಯ, ಮಾದರ ದೊಳ್ಳಯ್ಯ, ಸಮಗಾರ ಹರಳಯ್ಯ, ಇವರು ಸಮಸಮಾಜ ನಿರ್ಮಾಣ ಮಾಡಿದವರು. ಹಾಗೆಯೇ ರಾಜಕೀಯವಾಗಿ ಎಲ್ಲರೂ ಮುಂದೆ ಬರಬೇಕು ಎಂದು ಕರೆ ನೀಡಿದರು.

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, 12ನೇ ಶತಮಾನದ ವಚನಕಾರರು ಶೋಷಣೆ ವಿರುದ್ಧ ಹೋರಾಡಿದವರು. ಪ್ರತಿಯೊಬ್ಬ ವ್ಯಕ್ತಿಗೂ ಸಾಮಾಜಿಕ ಸಮಾನತೆ ಸಿಗಬೇಕು ಎಂಬುದು ಅವರ ಆಸಕ್ತಿಯಾಗಿತ್ತು ಎಂದರು.

ಮದೆನಾಡು ಮದೆ ಮಹೇಶ್ವರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸಿದ್ದರಾಜು ಮಾತನಾಡಿ, ಸಮಾಜವನ್ನು ಕತ್ತಲಿನಿಂದ ಬೆಳಕಿನೆಡೆಗೆ ತಂದ ಕೀರ್ತಿ ದಲಿತ ವಚನಕಾರರಿಗೆ ಸಲ್ಲುತ್ತದೆ. 12ನೇ ಶತಮಾನದ ಪೂರ್ವಾರ್ಧ ಕಾಲದಲ್ಲಿ ಜನರು ನಿಟ್ಟುಸಿರು ಬಿಡುತ್ತಿದ್ದಂತಹ ಕಾಲದಲ್ಲಿ ಕ್ರಾಂತಿಯನ್ನು ಮಾಡಿದವರು ದಲಿತ ವಚನಕಾರರು ಇವರ ಹೋರಾಟದ ಫಲವಾಗಿ ಜನರಿಗೆ ಇಂದು ಬೆಳಕು ಸಿಕ್ಕಂತಾಯಿತ್ತು. ಎಂದು ಅವರು ನುಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಮಾತನಾಡಿದರು. ಕನ್ನಡ ಮತ್ತು ಸಂಸ್ಕø ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿದರು, ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕಿ ಸಾವಿತ್ರಿ ನಿರೂಪಿಸಿದರು, ಮಂಜುನಾಥ್ ವಂದಿಸಿದರು.