ಕುಶಾಲನಗರ, ಫೆ. 15: ಕುಶಾಲನಗರದ ಬೈಚನಹಳ್ಳಿಯ ಗ್ರಾಮದೇವತೆ ಶ್ರೀ ಮಾರಿಯಮ್ಮ ದೇವಿಯ 9ನೇ ವಾರ್ಷಿಕ ಉತ್ಸವವು ತಾ.17 ರಂದು ನಡೆಯಲಿದೆ. ವೇದಬ್ರಹ್ಮ ಶ್ರೀ ಹರಿಭಟ್ ನೇತೃತ್ವದಲ್ಲಿ ದೇವಾಲಯದಲ್ಲಿ ಅಂದು ಬೆಳಿಗ್ಗೆ 7.30 ರಿಂದ ವಿಶೇಷ ಪೂಜಾ ವಿಧಿಗಳು ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ಮತ್ತು ಅನ್ನದಾನ ನಡೆಯಲಿದೆ.