ಸಿದ್ದಾಪುರ, ಫೆ. 15: ಕೊಡಗು ಜಿಲ್ಲೆಯ ಮೂಲಕ ಹಾದುಹೋಗುವ ರೈಲ್ವೇ ಮಾರ್ಗ ವಿರೋಧಿಸಿ ತಾ. 18 ರಂದು ಮೈಸೂರಿನಲ್ಲಿ ನಡೆಯುವ ಪ್ರತಿಭಟನಾ ರ್ಯಾಲಿಗೆ ಸಿದ್ದಾಪುರ ಕೊಡವ ಕಲ್ಚುರಲ್ ಅಸೋಸಿಯೇಷನ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಅಸೋಸಿಯೇಷನ್‍ನ ಅಧ್ಯಕ್ಷ ದೇವಣಿರ ಸುಜಯ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಅಸೋಸಿಯೇಷನ್‍ನ ಉಪಾಧ್ಯಕ್ಷ ಪುಟ್ಟಿಚಂಡ ಡಯಾನ ಸೋಮಯ್ಯ ಮಾತನಾಡಿ, ಕೊಡಗು ಜಿಲ್ಲಾ ರೈತ, ಕಾರ್ಮಿಕರ ಅರಣ್ಯ ಹೋರಾಟ ಸಮಿತಿ ತಾ. 23 ರಂದು ನಡೆಸಲು ಉದ್ದೇಶಿಸಿರುವ ಬೃಹತ್ ಪ್ರತಿಭಟನೆ ಹಾಗೂ ಅರಣ್ಯ ಭವನ ಮುತ್ತಿಗೆ ಕಾರ್ಯಕ್ರಮಕ್ಕೆ ಅಸೋಸಿಯೇಷನ್ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.

ಗೋಷ್ಠಿಯಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷರಾದ ವೀಣಾ ಕುಂಞಪ್ಪ, ಸದಸ್ಯ ಪಾಲೆಕಂಡ ಅಚ್ಚಯ್ಯ, ಪದಾಧಿಕಾರಿಗಳಾದ ನೆಲ್ಲಮಕ್ಕಡ ಅಶೋಕ್ ಮಾಚಯ್ಯ, ನಡಿಕೇರಿಯಂಡ ಮೋಹನ್ ಮಾಚಯ್ಯ, ಬಲ್ಲಾರಂಡ ಅಭೀತ್, ಚೇರಂಡ ಸುನಿಲ್, ಮೂಕಂಡ ಸುಬ್ರಮಣಿ, ಚೇನಂಡ ಕರುಂಬಯ್ಯ, ಪೊನ್ನಚ್ಚಂಡ ವಿಷ್ಣು ಬೆಳ್ಯಪ್ಪ, ಅಪ್ಪಾರಂಡ ತರುಣ್ ಹಾಜರಿದ್ದರು.