ಮಡಿಕೇರಿ, ಫೆ.15 : ನಗರಸಭೆಂ iÀುಲ್ಲಿ ಪ್ರಮುಖ ಸ್ಥಾನಗಳನ್ನು ಹೊಂದಿರುವ ಬಿಜೆಪಿ ಸದಸ್ಯರೆ ಭ್ರಷ್ಟಾಚಾರದಲ್ಲಿ ತೊಡಗಿದ್ದು, ವಿನಾಕಾರಣ ಅಧ್ಯಕ್ಷರ ಆಡಳಿತ ವೈಖರಿ ವಿರುದ್ಧ ಟೀಕೆ ಮಾಡುವ ಮೂಲಕ ಜನರ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ನಗರಸಭೆಯ ಕಾಂಗ್ರೆಸ್ ಸದಸ್ಯ ಹೆಚ್.ಎಂ.ನಂದಕುಮಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ನೂತನ ಕಟ್ಟಡಗಳ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ಖಾತರಿ ಪತ್ರ ನೀಡುವದಕ್ಕಾಗಿ ಅಕ್ರಮ ದಂಧೆ ನಡೆಯುತ್ತಿದ್ದು, ನಗರಸಭೆÉಯ ಪ್ರಮುಖ ಸ್ಥಾನಗಳಲ್ಲಿ ಅಧಿಕಾರದಲ್ಲಿ ರುವ ಬಿಜೆಪಿ ಮಂದಿ ತೊಡಗಿಸಿ ಕೊಂಡಿದ್ದಾರೆ ಎಂದು ಆರೋಪಿಸಿ ದರು. ಯಾವದೇ ಕಟ್ಟಡ ಗಳು ನಿರ್ಮಾಣ ಹಂತದಲ್ಲಿರುವಾಗ ಹಣಕ್ಕಾಗಿ ಒತ್ತಡ ಹೇರುವದಲ್ಲದೆ ಬೆದರಿಕೆ ಒಡ್ಡಿದ ಪ್ರಕರಣಗಳು ಕೂಡ ಇವೆ. ಕೆಲವರು ಅನಾಮಧೇಯ ಪತ್ರ ಬರೆದು ಬಿಜೆಪಿ ಸದಸ್ಯರ ಭ್ರಷ್ಟಾಚಾರದ ಬಗ್ಗೆ ಅಳಲು ತೋಡಿಕೊಂಡಿದ್ದಾರೆ ಎಂದರು.
ಗುತ್ತಿಗೆದಾರರಿಗೂ ಹಣಕ್ಕಾಗಿ ಕಿರುಕುಳ ನೀಡಲಾಗುತ್ತಿದ್ದು, ಕೆಲವು ಗುತ್ತಿಗೆದಾರರು ಕಾಮಗಾರಿ ನಡೆಸುವದನ್ನೆ ಕೈಬಿಟ್ಟಿದ್ದಾರೆ. ನಗರಸಭೆÉ ಕಛೇರಿಯಲ್ಲು ಈ ಮಂದಿ ಸಿಬ್ಬಂದಿಗಳಿಗೆ ಬೆದರಿಕೆಯೊಡ್ಡುತ್ತಿದ್ದು, ಖಾಲಿ ಇರುವ ಹುದ್ದೆಗಳು ಭರ್ತಿಯಾಗದಿರಲು ಇವರುಗಳೇ ಕಾರಣವೆಂದು ಆರೋಪಿಸಿದರು. ಫಾರಂ ನಂ.3ಗೆ ಸಂಬಂಧಿಸಿದಂತೆ 2166 ಅರ್ಜಿಗಳು ಬಂದಿದ್ದು, 1898 ಅರ್ಜಿಗಳು ವಿಲೇವಾರಿಯಾಗಿವೆ.
ನಗರಸಭಾ ಅಧ್ಯಕ್ಷರು ಅತ್ಯಂತ ಉತ್ಸಾಹದಿಂದಲೆ ಕಾರ್ಯನಿರ್ವ ಹಿಸುತ್ತಿದ್ದು, ಅಧ್ಯಕ್ಷರ ಆಸಕ್ತಿಯಿಂದಲೆ ಕುಂಡಾಮೇಸ್ತ್ರಿ ಯೋಜನೆ ಪ್ರಗತಿ ಸಾಧಿಸುತ್ತಿದೆ. ಅಲ್ಲದೆ, ನೂತನ ಖಾಸಗಿ ಬಸ್ ನಿಲ್ದಾಣ ಮತ್ತು ಮಾರುಕಟ್ಟೆ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗುತ್ತಿದೆ ಎಂದು ಸಮರ್ಥಿಸಿಕೊಂಡರು.
ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾóಕ್ ಮಾತನಾಡಿ, ನಗರಸಭೆÉಯ ಸದಸ್ಯರುಗಳು ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ದೂರಮಾಡಿ ನಗರದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕೆಂದು ಕರೆ ನೀಡಿದರು. ನಾಲ್ಕು ವರ್ಷಗಳ ಕಾಲ ಕೇವಲ ಕಲಹದಲ್ಲೆ ಕಾಲಹರಣ ವಾಗಿದ್ದು, ಉಳಿದಿರುವ ಒಂದು ವರ್ಷವಾದರು ನಗರದ ಅಭಿವೃದ್ಧಿಯ ಬಗ್ಗೆ ಸದಸ್ಯರು ಕಾಳಜಿ ತೋರಲಿ ಎಂದರು. ಸರ್ಕಾರದಿಂದ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿದ್ದು, ನಗರಸಭೆಯ ಎಲ್ಲಾ ವಾರ್ಡ್‍ಗಳಿಗೆ ಸಮಾನ ರೀತಿಯಲ್ಲಿ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಅನುದಾನ ಬರುತ್ತಿಲ್ಲ ಎನ್ನುವ ಆರೋಪದಲ್ಲಿ ಹುರುಳಿಲ್ಲ ವೆಂದು ಅವರು ಸ್ಪಷ್ಟಪಡಿಸಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕರಾದ ತೆನ್ನಿರ ಮೈನಾ ಮಾತನಾಡಿ, ಈ ಹಿಂದೆ ಬಿಜೆಪಿ ತಾನು ಸಾಧಿಸಿದ ಪ್ರಗತಿಯ ಬಗ್ಗೆ ಹೊರಡಿಸಿದ ಶ್ವೇತ ಪತ್ರದಲ್ಲಿ ಯುಜಿಡಿಗಾಗಿ 49.56 ಕೊಟಿ ರೂ.ಗಳನ್ನು ಮೀಸಲಿಟ್ಟಿರುವದಾಗಿ ತಿಳಿಸಿದೆ. ಅವರು ಜಾರಿಗೆ ತಂದ ಯೋಜನೆಯನ್ನೇ ಈಗ ಅನುಷ್ಟಾನ ಗೊಳಿಸಲಾಗಿದೆ. ಆದರೂ, ಯುಜಿಡಿ ಕಾಮಗಾರಿ ವಿರುದ್ಧ ಇಂದು ಬಿಜೆಪಿ ಅಪಸ್ವರ ಎತ್ತುತ್ತಿರುವದು ಹಾಸ್ಯಾಸ್ಪದ ವಾಗಿದೆ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯ ಪ್ರಕಾಶ್ ಆಚಾರ್ಯ, ನಾಮ ನಿರ್ದೇಶಿತ ಸದಸ್ಯ ಯತೀಶ್ ಹಾಗೂ ಪ್ರಮುಖ ಸದಾ ಮುದ್ದಪ್ಪ ಇದ್ದರು.