ಮಡಿಕೇರಿ, ಫೆ. 15: ಗಾಳಿಬೀಡು ನಿವಾಸಿ ಬದಲೇರ ಕಾರ್ಯಪ್ಪ ಮತ್ತು ಮೇನಕಾ ದಂಪತಿಗಳ ಪುತ್ರಿ, ಬದಲೇರ ಮಮತಾ ಹಿಂದೂಸ್ಥಾನಿ ಸಂಗೀತ ಕಲೆಯಲ್ಲಿ ಎಂ.ಎ. ಪದವಿಗೆ ಬರೆದ ಪ್ರಬಂಧವೊಂದಕ್ಕೆ ಚಿನ್ನದ ಪದಕ ಲಭ್ಯವಾಗಿದೆ. ಸಂಗೀತದಲ್ಲಿ ಆಧ್ಯಾತ್ಮಿಕತೆ, ಯೋಗ ಹಾಗೂ ಭಕ್ತಿ ಎಂಬ ಪ್ರಬಂಧಕ್ಕೆ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ನೀಡುವ ಡಾ. ಸತ್ಯನಾರಾಯಣ ಚಿನ್ನದ ಪದಕ ಲಭಿಸಿದೆ.