ಮಡಿಕೇರಿ, ಫೆ. 17: ಕೊಡಗಿನ ಸಂಸ್ಕ್ರತಿ,ಆಚಾರವಿಚಾರ ಹಾಗೂ ಪದ್ಧತಿ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮವಹಿಸುತ್ತಾ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೊಡಗಿನ ಮಹಾನ್ ವ್ಯಕ್ತಿಗಳ ಸ್ಮರಣೆಯನ್ನು ಮಾಡುತ್ತಾ ಬರುತ್ತಿರುವ ಕೊಡವ ಮಕ್ಕಡ ಕೂಟ ತಾ. 18ಕ್ಕೆ (ಇಂದು) 5ನೇ ವರ್ಷವನ್ನು ದಾಟಿ 6ನೇ ವರ್ಷಕ್ಕೆ ಕಾಲಿಡುತ್ತಿದೆ.
2013ರಲ್ಲಿ ಕೂಟವನ್ನು ಪ್ರಾರಂಭಿಸಿ ಕಳೆದ ಮೂರು ವರ್ಷಗಳಿಂದ ಪ್ರತಿ ವರ್ಷವೂ ಕೊಡಗಿನ ಹಲವೆಡೆ ಆಟ್ ಪಾಟ್ ಪಡಿಪು ಕಾರ್ಯಕ್ರಮದಡಿ ಕೊಡವ ಮಕ್ಕಳಿಗೆ ಕೊಡವ ಸಾಂಸ್ಕøತಿಯ ತರಬೇತಿಯನ್ನು ನೀಡುತ್ತಾ, ಮುಂದಿನ ಪೀಳಿಗೆಗೆ ಕೊಡಗಿನ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದೆ. ಕೊಡವ ಬೈರೇಸ್ ಅನ್ವಯ ಕೊಡವರ ಕೋವಿ ಹಕ್ಕಿನ ಬಗ್ಗೆ ಸರಕಾರದ ಹೊಸ ಕಾನೂನಿನ ವಿರುದ್ಧ ಹೋರಾಟ ನಡೆಸಿಕೊಂಡೇ ಬರುತ್ತಿದೆ.
ಮಡಿಕೇರಿಯಲ್ಲಿ ಸಾಧಕರಾದ ಕೊಂಗಂಡ ಗಣಪತಿ ಬೀದಿ, ಅಪ್ಪನೆರವಂಡ ಹರದಾಸ ಅಪ್ಪಚ್ಚ ಕವಿ ರಸ್ತೆ, ಕೊಡಗಿನ ಗಾಂಧಿ ಪಂದ್ಯಂಡ ಬೆಳ್ಯಪ್ಪ ರಸ್ತೆ, ದಾನಿ ಕೊರವಂಡ ನಂಜಪ್ಪ ಅವರ ನಾಮಫಲಕವನ್ನು ಇಡುವ ಕಾರ್ಯದ ಜೊತೆಗೆ 1965ರ ಭಾರತ ಪಾಕಿಸ್ತಾನ ಯುದ್ದದಲ್ಲಿ ಶತ್ರುಗಳ ಹುಟ್ಟಡಗಿಸಿ ಹುತಾತ್ಮರಾದ ಸ್ಕ್ವಾಡನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತವನ್ನು ಹಾಗೂ ಕೊಡವ ವiಕ್ಕಡ ಕೂಟದ ವತಿಯಿಂದ ಕೊಡಗಿನ ಸೇನಾನಿಗಳ ಸಮ್ಮುಖದಲ್ಲಿ ಅವರ ಮೃತಪಟ್ಟ ದಿನವನ್ನು ಸಹ ಆಚರಿಸಿಕೊಂಡು ಬರುತ್ತಿದೆಯಲ್ಲದೆ ಖಾಸಗಿ ಬಸ್ ನಿಲ್ದಾಣದ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ದೇವಯ್ಯರವರ ಕಂಚಿನ ಪುತ್ಥಳಿಯನ್ನು ಸ್ಥಾಪನೆ ಮಾಡಬೇಕೆಂದು ಶ್ರಮವಹಿಸಿ ಅಜ್ಜಮಾಡ ಕುಟುಂಬದ ಸಹಕಾರದೊಂದಿಗೆ ಬಿಡದಿಯಲ್ಲಿ ಕಂಚಿನ ಪುತ್ಥಳಿ ತಯಾರಾಗುತಿದ್ದು, ಸದ್ಯದಲ್ಲೇ ಪ್ರತಿಷ್ಠಾಪನೆಗೊಳ್ಳಲಿದೆ.
ಪ್ರತಿ ವರ್ಷ ಅಕ್ಟೋಬರ್‍ನಲ್ಲಿ ನಡೆಯುವ ಕಾವೇರಿ ತೀರ್ಥೊದ್ಬವದಂದು ಕೊಡವ ಮಕ್ಕಡ ಕೂಟವು ಕುಲದೇವಿ ಕಾವೇರಿ ಸನ್ನಿಧಿಗೆ ತೀರ್ಥಯಾತ್ರೆ ತೆರಳಿ ಕೊಡಗಿನ ಹಲವೆಡೆ ತೀರ್ಥ ವಿತರಿಸುವ ಪುಣ್ಯ ಕಾರ್ಯವನ್ನು ಮಾಡುತ್ತಿದೆ. ಕೊಡಗಿನ ವಿವಿಧ ಕಡೆ ಭೂಮಿತಾಯಿಗೆ ಪೂಜಿಸಿ ಎತ್ತನ್ನು ಕಟ್ಟಿ ಗದ್ದೆಯನ್ನು ಉಳುವ ಮೂಲಕ ಪ್ರತೀ ವರ್ಷ ಏಪ್ರಿಲ್ 14ರಂದು ಕೊಡವ ಎಡಮ್ಯಾರ್ ಅನ್ನು ಸುತ್ತಸುತ್ತಲಿನ ಊರಿನವರನ್ನು ಸೇರಿಸಿ ಆಚರಿಸುತ್ತಾ ಬರುತ್ತಿದೆ. ಕೊಡವ ಸಂಸ್ಕøತಿಯನ್ನು ಉಳಿಸುವ ಸಲುವಾಗಿ ಕೊಡವ ಕುಟುಂಬಗಳ ನಡುವಿನ ಉಮ್ಮತ್ತ್ ಬೊಳಕ್ ಎಂಬ ಸಾಂಸ್ಕ್ರತಿಕ ನೃತ್ಯ ಸ್ಫರ್ಧೆಯನ್ನು, ಕೊಡವ ಸಾಹಿತ್ಯ ಅಕಾಡೆಮಿಯೊಂದಿಗೆ, ಕುಂಞÂಯಡ ಕೊಡವ ಜನಪದ ಸಾಂಸ್ಕ್ರತಿಕ ನಮ್ಮೆಯನ್ನು (ಮಕ್ಕಳ ಹಬ್ಬವನ್ನು) ಹಾಗೂ ಕೊಡಗಿನ ಕೆಲವೆಡೆ ಹಲವು ಕಾರ್ಯಕ್ರಮವನ್ನು ಮಾಡುತ್ತಾ, ಬರುತ್ತಿರುವ ಕೊಡವ ಆಚಾರ ವಿಚಾರವನ್ನು ಇನ್ನಷ್ಟು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿದೆ.
ಪವಳಸಾಲ್, ಆಟ್ ಪಾಟ್ ಪಡಿಪು ಪುಸ್ತಕ, ಚಾಯಿ, 1965 ಯುದ್ಧ ಹಾಗೂ ಕೊಡವ ವೀರ, ಕೊಡವಾಮೆಕ್ ಬಂದಲಕೆ,ಬಲ್ಲಾದೆ ಪಳಮೆ,ಕೊಡವರು ಹಾಗೂ ಕಾವೇರಿ,ಮಾವೀರ ಅಚ್ಚುನಾಯಕ,ಕೊಡಗಿನ ಗಾಂಧಿ ಪಂದ್ಯಂಡ ಐ. ಬೆಳ್ಯಪ್ಪ ಹೀಗೆ ಹಲವು ಕ್ರತಿಗಳನ್ನು ಪ್ರಚಾರಪಡಿಸಿದುದರ ಜೊತೆಗೆ ಇನ್ನು ಹಲವು ಕೊಡವ ಸಾಧಕರ ಪುಸ್ತಕವನ್ನು ದಾಖಲಿಕರಿಸುವ ಬಗ್ಗೆ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಯೋಜನೆ ಹೊಂದಿದ್ದಾರೆ.
-ಪುತ್ತರಿರ ಕರುಣ್ ಕಾಳಯ್ಯ