ಮಡಿಕೇರಿ, ಫೆ. 17: ಮಾಜಿ ಸೈನಿಕರು ತಮ್ಮ ಇ.ಸಿ.ಹೆಚ್.ಎಸ್. ಹೊಸ ಸ್ಮಾರ್ಟ್ ಕಾರ್ಡ್ಗಳನ್ನು ಆನ್ಲೈನ್ ಮೂಲಕ ಪಡೆದುಕೊಳ್ಳಲು ಕೋರಲಾಗಿದೆ. ಇ.ಸಿ.ಹೆಚ್.ಎಸ್. ಕಾರ್ಡ್ ಪಡೆಯಲು ತಿತಿತಿ.eಛಿhs.gov.iಟಿ ವೆಬ್ಸೈಟ್ ಮೂಲಕ ಮಾಜಿ ಸೈನಿಕರು ತಮ್ಮ ಅಧಿಕೃತ ಮೊಬೈಲ್ ಹಾಗೂ ಇ-ಮೇಲ್ ಮುಖಾಂತರ ರಿಜಿಸ್ಟರ್ ಮಾಡತಕ್ಕದ್ದು. ನಂತರ ತಮಗೆ ಸಂಬಂಧಿಸಿದ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿ ಹಳೆಯ ಕಾರ್ಡ್ ಹೊಂದಿರುವವರು ಆನ್ಲೈನ್ ಅರ್ಜಿಯನ್ನು ತಮ್ಮ ಅವಲಂಬಿತ ಸದಸ್ಯರ ಹೆಸರು ಮುಂತಾದ ವಿವರಗಳನ್ನು ಭರ್ತಿ ಮಾಡುವದು. ಮಾಜಿ ಸೈನಿಕರು ತಮ್ಮ ಪಿ.ಪಿ.ಓ. ಎಲ್ಲಾ ಸದಸ್ಯರ ಭಾವಚಿತ್ರ ಹಾಗೂ ಸಹಿಗಳನ್ನು ಮತ್ತು ತಮ್ಮ ಹಳೆಯ ಸ್ಮಾರ್ಟ್ ಕಾರ್ಡ್ ಅಥವಾ ತಾತ್ಕಾಲಿಕ ಸದಸ್ಯ ಚೀಟಿಯನ್ನು ಅಪ್ಲೋಡ್ ಮಾಡುವದು. ಒಂದು ಹೊಸ ಕಾರ್ಡ್ಗೆ ರೂ. 177 ರಂತೆ ಆನ್ಲೈನ್ ಪಾವತಿ ಮಾಡುವದು. ತಾತ್ಕಾಲಿಕ ಚೀಟಿಯನ್ನು ಪಡೆದು ತಮ್ಮ ಸ್ಥಳೀಯ ಇ.ಸಿ.ಹೆಚ್.ಎಸ್. ಆಸ್ಪತ್ರೆಗೆ ಭೇಟಿ ನೀಡಿ ಓಐಸಿ ಅವರ ಸಹಿಯನ್ನು ಪಡೆಯಬೇಕು. ಹೆಚ್ಚಿನ ವಿವರ - ಮಾಹಿತಿಗೆ ಸ್ಥಳೀಯ ಇ.ಸಿ.ಹೆಚ್.ಎಸ್. ಆಸ್ಪತ್ರೆಯನ್ನು ಸಂಪರ್ಕಿಸುವಂತೆ ಇ.ಸಿ.ಹೆಚ್.ಎಸ್. ಅಧಿಕಾರಿ ಪಿ.ಬಿ. ಅಯ್ಯಪ್ಪ ತಿಳಿಸಿದ್ದಾರೆ.