ನಾಪೆÇೀಕ್ಲು, ಫೆ. 17: ಜೆಡಿಎಸ್ ಪ್ರಾಥಮಿಕ ಸದಸ್ಯತ್ವ ಪಡೆಯದವರು ಕುಮಾರ ಸ್ವಾಮಿ ಬಳಗದ ಹೆಸರಿನಲ್ಲಿ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ವಿರುದ್ಧ ಹೇಳಿಕೆ ನೀಡುತ್ತಿರುವದು ಖಂಡನೀಯ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಎ. ಮನ್ಸೂರ್ ಅಲಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರ ಸ್ವಾಮಿ ಬಳಗ ಹಿಂದಿನಿಂದಲೂ ಇದೆ. ಆದರೆ ಕಳೆದ ಐದು ವರ್ಷಗಳ ಕಾಲ ಜಿಲ್ಲೆಯಲ್ಲಿ ಈ ಬಗ್ಗೆ ಪ್ರಚಾರದಲ್ಲಿರದ ಈ ಬಳಗ ಈಗ ಜಿಲ್ಲಾಧ್ಯಕ್ಷರ ವಿರುದ್ಧ ಹೇಳಿಕೆ ನೀಡುತ್ತಿರುವದರ ಹಿಂದೆ ಷಡ್ಯಂತರ ಅಡಗಿದೆ ಎಂದು ಟೀಕಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಯುವ ಜನತಾದಳ ಕಾರ್ಯದರ್ಶಿ ಕೆ.ಜೆ. ಜಾಹಿರ್, ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ, ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸದಸ್ಯ ಪಿ.ಎಂ. ರಶೀದ್, ನಾಪೆÇೀಕ್ಲು ಪಟ್ಟಣ ಜೆಡಿಎಸ್ ಅಧ್ಯಕ್ಷ ಆಶಿಫ್ ಅಲಿ ಇದ್ದರು.