ಮಡಿಕೇರಿ, ಫೆ. 17: ಭಾರತೀಯ ಸಂಸ್ಕøತಿ, ಪರಂಪರೆ, ಆಚಾರ - ವಿಚಾರ, ನಂಬಿಕೆ, ಜೀವನ ದರ್ಶನ ಪುರಾತನವಾದುದು. ವಿದೇಶಿಯರು ಇಂದು ಭಾರತೀಯ ಸಂಸ್ಕøತಿಯನ್ನು ಆಚರಣೆ ಮಾಡುವಂತಾಗಿದೆ. ವಿಶ್ವಕ್ಕೆ ಜೀವನ ಮೌಲ್ಯಗಳನ್ನು ಕೊಡುಗೆಯಾಗಿ ಭಾರತ ನೀಡಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಸಹವಿಭಾಗ ಪ್ರಚಾರಕ್ ಉಮೇಶ್ ಅಭಿಪ್ರಾಯಪಟ್ಟಿದ್ದಾರೆ.

ಆರ್‍ಎಸ್‍ಎಸ್‍ನ ಕಡಗದಾಳು ಶಾಖಾ ವಾರ್ಷಿಕೋತ್ಸವ ಮತ್ತು ಮಂಡಲ ಸಂಚಲನದಲ್ಲಿ ಬೌದ್ಧಿಕ್ ಮಾಡಿದರು. ಎಲ್ಲಾ ಜೀವಿಗಳಲ್ಲಿ ಭಗವಂತನನ್ನು ಕಾಣುವದು, ಪರಸ್ತ್ರೀಯರನ್ನು ತಾಯಿಯಾಗಿ ಗೌರವಿಸುವದು, ಹುಟ್ಟು ಸಾವಿನಲ್ಲಿ ಪುನರ್ಜನ್ಮದ ಫಲವನ್ನು ಕಾಣುವದು ಭಾರತೀಯ ಜೀವನ ಮೌಲ್ಯವಾಗಿದೆ. ಆದರೆ ಇಂದು ಜೀವನ ಮೌಲ್ಯಗಳು ಪರಕೀಯರ ಧಾಳಿಯಿಂದಾಗಿ ನಶಿಸುವಂತಾಗಿದ್ದು, ಮತ್ತೆ ಜೀವನ ಮೌಲ್ಯಗಳನ್ನು ಎತ್ತಿ ಹಿಡಿದು ಭಾರತವನ್ನು ಜಗದ್ಗುರುವಾಗಿ ಮಾಡುವದೇ ಸಂಘದ ಧ್ಯೇಯ ವಾಗಿದೆ. ಆ ನಿಟ್ಟಿನಲ್ಲಿ ಸ್ವಯಂಸೇವಕರು ಸಮಯ ನೀಡಿ ಕಾರ್ಯವನ್ನು ಬೆಳೆಸುವಂತೆ ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ನೀರುಕೊಲ್ಲಿ ನಿವಾಸಿ, ಮಾಜಿ ಸೈನಿಕ ತನಿಯಪ್ಪ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಸಂಘ ಚಾಲಕ್ ಚೆಕ್ಕೇರ ಮನು ಕಾವೇರಪ್ಪ ಉಪಸ್ಥಿತರಿದ್ದರು. ವಾರ್ಷಿಕೋತ್ಸವ ನಿಮಿತ್ತ ಮಂಡಲದ 200ಕ್ಕೂ ಅಧಿಕ ಸ್ವಯಂಸೇವಕರಿಂದ ಕಡಗದಾಳು ಪೇಟೆಯಲ್ಲಿ ಪಥಸಂಚಲನ ನಡೆಯಿತು.

ಬಿ.ಬಿ.ಮಹೇಶ್ ಸ್ವಾಗತಿಸಿ, ಕೆ.ಎಸ್. ಗಣೇಶ್ ವಂದಿಸಿ, ಕಾರ್ಯಕ್ರಮದಲ್ಲಿ ಮಡಿಕೇರಿ ಗ್ರಾಮಾಂತರ ತಾಲೂಕು ಕಾರ್ಯವಾಹ ಶಿವರಾಜ್, ನಗರ ಕಾರ್ಯವಾಹ ಪವನ್ ವಶಿಷ್ಠ, ಕಡಗದಾಳು ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಭಯ್ಯ ಸೇರಿದಂತೆ ಇತರರು ಇದ್ದರು.