ಸೋಮವಾರಪೇಟೆ,ಫೆ.15: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಿರಗಂದೂರು ಮಂಡಲಕ್ಕೆ ಒಳಪಡುವ ತಾಕೇರಿ ಶಾಖೆಯ ವಾರ್ಷಿಕೋತ್ಸವ ಸಮಾರಂಭ ಗ್ರಾಮದ ಸಮುದಾಯ ಭವನ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ.ಪಂ. ಮಾಜೀ ಅಧ್ಯಕ್ಷ ಎಂ.ಪಿ. ಮುತ್ತಣ್ಣ ವಹಿಸಿದ್ದರು. ಆರ್‍ಎಸ್‍ಎಸ್ ಜಿಲ್ಲಾ ಪ್ರಚಾರಕ್ ಅವಿನಾಶ್ ಮುಖ್ಯ ಭಾಷಣ ಮಾಡಿದರು. ಗಣವೇಷಧಾರಿ ಸ್ವಯಂಸೇವಕರಿಂದ ವಿವಿಧ ಯೋಗಾಸನ ಪ್ರದರ್ಶನ ನಡೆಯಿತು. ಸಮಾರಂಭದಲ್ಲಿ ಹಿರಿಯ ಸ್ವಯಂಸೇವಕರಾದ ಪುಟ್ಟರಾಜು, ಎಸ್.ಕೆ. ರಘು, ಪೂವಯ್ಯ, ವೀರರಾಜು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.