ಕುಶಾಲನಗರ, ಫೆ. 17: ದುಬಾರೆ ಪ್ರವಾಸಿ ತಾಣದಲ್ಲಿ ಬುಧವಾರ ಗುಂಪು ಘರ್ಷಣೆ ನಡೆದು ಪ್ರವಾಸಿಗರೊಬ್ಬರು ಸಾವಿಗೀಡಾದ ಪ್ರಕರಣ ವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ.ಇಂದು ದುಬಾರೆಗೆ ಭೇಟಿ ನೀಡಿದ ಅವರು ಮುಂದಿನ ದಿನಗಳಲ್ಲಿ ಈ ಪ್ರವಾಸಿ ತಾಣದಲ್ಲಿ ಕಾನೂನು ವ್ಯವಸ್ಥೆ ಹದಗೆಡದಂತೆ ನಿಯಂತ್ರಿಸುವದಕ್ಕಾಗಿ ದುಬಾರೆಯಲ್ಲಿ ನೂತನ ವಾಗಿ ಪೊಲೀಸ್ ಉಪ ಠಾಣೆ ತೆರೆಯುವಂತೆ ನಿರ್ಧಾರ ಪ್ರಕಟಿಸಿದ್ದಾರೆ.
ದುಬಾರೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಎಸ್.ಪಿ. ಅವರು ಈ ಬಗ್ಗೆ ಜಿಲ್ಲಾಧಿಕಾರಿಯವ ರೊಂದಿಗೆ ಚರ್ಚಿಸಿ ಪ್ರವಾಸಿಗರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು.