ಗೋಣಿಕೊಪ್ಪಲು, ಫೆ. 16: ವೀರಾಜಪೇಟೆ ತಾಲೂಕು ಬಲಿಜ ಸಮಾಜ ನೇತೃತ್ವದಲ್ಲಿ ಕೊಡಗು ಜಿಲ್ಲಾ ಬಲಿಜ ಸಮಾಜ, ಮೂರು ತಾಲೂಕು ಬಲಿಜ ಸಮಾಜ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆ ತಾ.18 ರಂದು ವೀರಾಜಪೇಟೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ.ಮೇ ತಿಂಗಳ ಬಲಿಜ ಕ್ರೀಡೋತ್ಸವ, ತಾಲೂಕುವಾರು ಬಲಿಜ ಗಣತಿ ಪ್ರಗತಿ ಕುರಿತಂತೆ ಹಾಗೂ ಕ್ರೀಡಾ ಸಮಿತಿಯ ವಿವಿಧ ಉಪ ಸಮಿತಿಯ ಅಂತಿಮ ಆಯ್ಕೆ ನಡೆಯಲಿದೆ.ವೀರಾಜಪೇಟೆ ತಾಲೂಕು ಬಲಿಜ ಸಮಾಜ ಅಧ್ಯಕ್ಷ ಎಸ್.ಕೆ. ಗಣೇಶ್ ನಾಯ್ಡು ಅಧ್ಯಕ್ಷತೆಯಲ್ಲಿ ವೀರಾಜಪೇಟೆ ತಾಲೂಕು ಪದಾಧಿಕಾರಿಗಳ ಪರಿಷೃತ ಪಟ್ಟಿ ಪ್ರಕಟಣೆ ಹಾಗೂ ಬಲಿಜ ಸಮುದಾಯದ ಅಭ್ಯುದಯ ಕಾರ್ಯಕ್ರಮಗಳ ಕುರಿತು ಸಂವಾದ ಜರುಗಲಿದೆ.
ಜಿಲ್ಲಾ ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಕೊಡಗು ಬಲಿಜ ಕ್ರೀಡಾ ಹಬ್ಬ ಹಾಗೂ ಗಣತಿ ಕಾರ್ಯದ ಪ್ರಗತಿ ಬಗ್ಗೆ ಚರ್ಚೆ ನಡೆಯಲಿದೆ. ಕೊಡಗು ಜಿಲ್ಲಾ ಬಲಿಜ ಸಮಾಜದ ಕಾನೂನು ಸಲಹೆಗಾರ, ಮಡಿಕೇರಿ ವಕೀಲರಾದ ಎಂ.ವಿ. ಸಂಜಯ್ರಾಜ್ ಅವರು ಜಿಲ್ಲಾ ಬಲಿಜ ನಿರ್ದೇಶಕರ ಅಂತಿಮ ಪರಿಷ್ಕೃತ ಕರಡು ಪಟ್ಟಿಯನ್ನು ಅಂದು ಪ್ರಕಟಿಸಲಿದ್ದಾರೆ.