ಮಡಿಕೇರಿ, ಫೆ. 16: ಜಿಲ್ಲೆಯ ವಿವಿಧ ವಿದ್ಯಾಸಂಸ್ಥೆಗಳಲ್ಲಿ ಹಮ್ಮಿಕೊಳ್ಳಲಾದ ವಿವಿಧ ಕಾರ್ಯಕ್ರಮಗಳು, ಆಯ್ಕೆ ಪ್ರಕ್ರಿಯೆಗಳು, ಕ್ರೀಡಾಕೂಟಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.ಪ್ರಾಮುಖ್ಯತೆ ನೀಡಿದಂತೆ ಸಂಶೋಧನೆಯ ಬಗೆಗೂ ಹೆಚ್ಚು ಆದ್ಯತೆ ನೀಡಬೇಕಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಪಿ.ಎಲ್. ಧರ್ಮ ಮಾತನಾಡಿ, ಒಂದು ಭಾಷೆ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಎಲ್ಲಾ ಹಂತ, ಆಯಾಮ ಹಾಗೂ ವಿಷಯಗಳಲ್ಲಿ ಸತ್ಯವನ್ನು ಶೋಧಿಸುವ ನಿರಂತರ ಪ್ರಯತ್ನ ಮಾಡುವದನ್ನು ಸಂಶೋಧನೆಯಲ್ಲಿ ಕಾಣಬಹುದಾಗಿದೆ ಎಂದರು. ಈ ಸಂದರ್ಭ ಕನ್ನಡ, ಇತಿಹಾಸ ಹಾಗೂ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಆಡಳಿತ ವರ್ಗದವರು ಉಪಸ್ಥಿತರಿದ್ದರು. ಕನ್ನಡ ಅಧ್ಯಯನ ವಿಭಾಗದ ಉಪನ್ಯಾಸಕ ಜûಮೀರ್ ಅಹಮದ್ ಸ್ವಾಗತಿಸಿ, ಕೆ.ಎಸ್. ಶ್ರೀನಿವಾಸ್ ವಂದಿಸಿದರು.
ಲೇಖನ ಸಾಮಗ್ರಿ ಕೊಡುಗೆ
ಕಗ್ಗೋಡ್ಲು: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಗ್ಗೋಡ್ಲುವಿನ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹಕರವಾಗಿ ಮತ್ತು ಸಂಕಲನಾತ್ಮಕ ಮೌಲ್ಯಮಾಪನ ಇದರ ಪುನರ್ ಮನನದ ಆ ಬರವಣಿಗೆಗಾಗಿ ಕಗ್ಗೋಡ್ಲುವಿನ ರೇರ್ ಎಸ್ಟೇಟ್ನ ಮಾಲೀಕರಾದ ರೇವತಿ ಯೋಗೇಶ್ ಕೃಷ್ಣಸ್ವಾಮಿ, ಶಾಲಾ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ, ಹಳೇ ವಿದ್ಯಾರ್ಥಿಗಳು ಇವರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿದರು. ಸತತ ನಾಲ್ಕು ವರ್ಷಗಳಿಂದಲೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆಂದು ಪೋಷಕ ವೃಂದದವರು ತಿಳಿಸಿದ್ದಾರೆ.
ಸಂಬಾರ ಬೆಳೆಗಳಿಂದ ಆರ್ಥಿಕ ಮಟ್ಟ ಸುಧಾರಣೆ
ಸೋಮವಾರಪೇಟೆ: ಸಂಬಾರ ಬೆಳೆಗಳಾದ ಏಲಕ್ಕಿ ಮತ್ತು ಕರಿಮೆಣಸನ್ನು ಉಪಬೆಳೆಯಾಗಿ ಬೆಳೆಯುವದರಿಂದ ಕೃಷಿಕರ ಆರ್ಥಿಕ ಮಟ್ಟ ಸುಧಾರಿಸುತ್ತದೆ ಎಂದು ಐಗೂರು ಸಂಬಾರ ಮಂಡಳಿಯ ಕ್ಷೇತ್ರಾಧಿಕಾರಿ ವಾಸು ಹೇಳಿದರು.
ಸಮೀಪದ ಐಗೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ “ಭುವನಕ್ಕೊಂದು ಸದನ” ಇಕೋ ಕ್ಲಬ್ ವತಿಯಿಂದ ಸಂಬಾರ ಮಂಡಳಿಯ ಸಸ್ಯ ಕ್ಷೇತ್ರಕ್ಕೆ ಭೇಟಿ ಮಾಡಿದ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.
ಏಲಕ್ಕಿ ಮತ್ತು ಕರಿಮೆಣಸು ಬೆಳೆಗಳಿಗೆ ಸಾವಯವ ಗೊಬ್ಬರಗಳನ್ನು ಬಳಸುವದು ಸೂಕ್ತ. ಕರಿಮೆಣಸನ್ನು ಸಾಧಾರಣವಾಗಿ ಫೆಬ್ರವರಿ ತಿಂಗಳಿನಲ್ಲಿ ನರ್ಸರಿ ಮಾಡಲಾಗುತ್ತದೆ. ಯಾವದೇ ಉಪಬೆಳೆಯನ್ನು ಬೆಳೆಯುವಾಗ ವಾತಾವರಣ, ಕೃಷಿಗೆ ಅನುಸರಿಸಬೇಕಾದ ಕ್ರಮಗಳು, ಗಿಡಗಳ ಆರೈಕೆ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದರು.
ಸಂಬಾರ ಬೆಳೆಗಳಾದ ಏಲಕ್ಕಿ ಮತ್ತು ಕರಿಮೆಣಸಿನ ವಿವಿಧ ತಳಿಗಳು, ಬೀಜಗಳ ಆಯ್ಕೆ, ಬೇಸಾಯ ಕ್ರಮ, ರೋಗ ನಿಯಂತ್ರಣ ಹೀಗೆ ಸಮಗ್ರ ಬೇಸಾಯದ ಕುರಿತು ಸವಿವರವಾದ ಪ್ರಾತ್ಯಕ್ಷಿಕೆ ನೀಡಿದರು. ಏಲಕ್ಕಿ ಹಾಗೂ ಕಾಳುಮೆಣಸಿನ ವಿವಿಧ ತಳಿಗಳನ್ನು, ರೋಗ ಪೀಡಿತ ಸಸ್ಯಗಳನ್ನು ಗುರುತಿಸುವ ವಿದಾನವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಜಂತುಹುಳು ನಿವಾರಣೆ ಕಾರ್ಯಾಗಾರ
ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಆಶ್ರಮ ಶಾಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಜಂತುಹುಳು ನಿವಾರಣೆ ಬಗ್ಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ತೊಂದರೆ ನೀಡುವ ಜಂತುಹುಳುವಿನ ಬಗ್ಗೆ ಮತ್ತು ಇದರಿಂದ ಮಕ್ಕಳಲ್ಲಿ ಬೀರುವ ತೊಂದರೆ, ಪರಿಣಾಮ, ತಡೆಗಟ್ಟುವ ವಿಧಾನ, ಮುಂಜಾಗೃತಾ ಕ್ರಮದ ಬಗ್ಗೆ ತಾಲೂಕು ವೈದ್ಯಾಧಿಕಾರಿ ರವಿಕುಮಾರ್ ವಿವರಿಸಿದರು.
ಈ ಸಂದರ್ಭ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಹಾಜರಿದ್ದರು. ತಾಲೂಕು ಮಹಿಳಾ ಆರೋಗ್ಯಾಧಿಕಾರಿ ಧಮಯಂತಿ ಮತ್ತು ಅಲ್ಲಿನ ಲ್ಯಾಂಪ್ಸ್ ಸಹಕಾರ ಸಂಘದ ನಿರ್ದೇಶಕ ಬಿ.ಕೆ. ಮೋಹನ್ ಶಾಲಾ ಮುಖ್ಯ ಶಿಕ್ಷಕ ವಸಂತ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಮತ್ತು ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.ದಂತ ಸಂರಕ್ಷಣೆ ಕಾರ್ಯಾಗಾರ
ಸುಂಟಿಕೊಪ್ಪ: ಸುಂಟಿಕೊಪ್ಪ ಜೆಸಿಐ ಸಂಸ್ಥೆ, ವತಿಯಿಂದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹಲ್ಲಿನ ರಕ್ಷಣೆ ಕುರಿತು ಮಾಹಿತಿ ಹಾಗೂ ಪೇಸ್ಟ್-ಬ್ರಶ್ಗಳನ್ನು ವಿತರಿಸಲಾಯಿತು.
ಸುಂಟಿಕೊಪ್ಪ ಜೆಸಿಐ ಸಂಸ್ಥೆ ಹಾಗೂ ಕೊಡಗು ಜಿಲ್ಲಾ ದಂತ ವೈದ್ಯರ ಸಂಘ, ವೀರಾಜಪೇಟೆ ದಂತ ವೈದ್ಯ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪ್ರಾಥಮಿಕ ಶಾಲಾವರಣದಲ್ಲಿ ನಡೆದ ದಂತ ಸಂರಕ್ಷಣೆ ಹಾಗೂ ಬಳಕೆಯ ಕುರಿತು ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲಾಯಿತು.
ದಂತ ವೈದ್ಯ ಕಾಲೇಜಿನ ಡಾ. ನೌಶ್ಯ ಮಾತನಾಡಿ, ಮಾನವರು ಸೇವಿಸಿದ ಆಹಾರವನ್ನು ಹಲ್ಲಿನ ಮೂಲಕ ಜಗಿದರೆ ಮಾತ್ರ ದೇಹದಲ್ಲಿ ಆಹಾರ ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯ ಎಂದರು. ಮನುಷ್ಯನ ಮುಖದ ಕಾಂತಿಯನ್ನು ವೃದ್ಧಿಸುತ್ತದೆ. ದೇಹದ ಇತರ ಅಂಗಾಂಗಳಿಗೂ ನೀಡುವ ಮಹತ್ವವನ್ನೇ ದಂತಕ್ಕೂ ನೀಡಬೇಕು. ಆಹಾರವನ್ನು ಸೇವಿಸಿದ ನಂತರ ದಿನಕ್ಕೆ 2 ಬಾರಿ ಪೇಸ್ಟ್ ಮೂಲಕ ಬ್ರಶ್ ಮಾಡುವಂತೆ ಮಕ್ಕಳಿಗೆ ಮಾಹಿತಿ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ ಜೆಸಿ ಹೆಚ್.ಆರ್. ಅರುಣ್ ಕುಮಾರ್ ವಹಿಸಿದ್ದರು. ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಗೀತಾ, ಜೆಸಿಐ ಸಂಸ್ಥೆಯ ಮಾಜಿ ಅಧ್ಯಕ್ಷೆ ಫೆಲ್ಸಿ ಡೆನ್ನಿಸ್, ಉಪಾಧ್ಯಕ್ಷರುಗಳಾದ ಪಿ.ಯು. ನಂದಕುಮಾರ್, ಟಿ.ಜಿ. ಪ್ರೇಮ್ ಕುಮಾರ್, ಖಜಾಂಚಿ ಜೆಸಿ ನಿರಂಜನ್, ದೈಹಿಕ ಶಿಕ್ಷಕ ಪಿ.ಇ. ನಂದ ಮತ್ತಿತರರು ಇದ್ದರು.
ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯ
ಗೋಣಿಕೊಪ್ಪ ವರದಿ: ಗೋಣಿಕೊಪ್ಪಲು ಸರ್ಕಾರಿ ಅನುದಾನಿತ ಪ್ರೌಢಶಾಲೆಯ ಟೈಗರ್ ಪಗ್ ಪರಿಸರ ಸಂಘದ ವಿದ್ಯಾರ್ಥಿ ಸದಸ್ಯರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು.
ರಸ್ತೆ ಬದಿಯಲ್ಲಿ ಬಿದ್ದಿದ್ದ ತ್ಯಾಜ್ಯಗಳನ್ನು ಸಂಗ್ರಹಿಸಿದ ವಿದ್ಯಾರ್ಥಿಗಳು ಸೂಕ್ತ ವಿಲೇವಾರಿಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಿದರು. ಸಂಗ್ರಹಿಸಿದ ತ್ಯಾಜ್ಯದಲ್ಲಿ ಬಹುತೇಕ ಮದ್ಯದ ಬಾಟಲ್ಗಳು ಕಂಡುಬಂದವು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಲಯ ಅರಣ್ಯಾಧಿಕಾರಿ ಪ್ರಸನ್ನಕುಮಾರ್ ಮಾತನಾಡಿ ವಾಹನಗಳಲ್ಲಿ ತೆರಳುವ ಪ್ರಯಾಣಿಕರು ಬಿಸಾಡುವ ತ್ಯಾಜ್ಯಗಳಿಂದ ವನ್ಯಜೀವಿಗಳ ಮೇಲಾಗುವ ದುಷ್ಪರಿಣಾಮವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಪ್ರಯಾಣಿಕರು ತಿಂಡಿ ತಿನಿಸುಗಳನ್ನು ಸೇವಿಸಿ ಎಸೆದಿರುವ ಪಾಸ್ಟಿಕ್ ಚೀಲಗಳಲ್ಲಿ ಇರುವ ಉಪ್ಪಿನ ಅಂಶವನ್ನು ಸೇವಿಸುವ ವನ್ಯಜೀವಿಗಳ ಹೊಟ್ಟೆಗೆ ಪ್ಲಾಸ್ಟಿಕ್ ಕೂಡ ಸೇರಿಕೊಂಡು ಪ್ರಾಣಿಗಳ ಜೀವಕ್ಕೆ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಅತಿಥಿಯಾಗಿ ಪಾಲ್ಗೊಂಡ ಉರಗ ಪ್ರೇಮಿ ಬೋಸ್ ಮಾದಪ್ಪ, ಇರ್ಪು ಗ್ರಾಮದಲ್ಲಿ ಪ್ರತಿವರ್ಷ ಕೈಗೊಳ್ಳುತ್ತಿರುವ ಸ್ವಚ್ಛತಾ ಕಾರ್ಯಕ್ರಮದ ಅನುಭವಗಳನ್ನು ವಿದ್ಯಾಥಿಗಳೊಂದಿಗೆ ಹಂಚಿಕೊಂಡರು. ವೈಲ್ಡ್ಲೈಫ್ ಫಸ್ಟ್ ಸಂಸ್ಥೆಯ ಅಧ್ಯಕ್ಷ ಚಿಣ್ಣಪ್ಪ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಸಂಘದ ಸಂಚಾಲಕ ಕೃಷ್ಣಚೈತನ್ಯ ಮಾತನಾಡಿ, ಸ್ವಚ್ಛತೆ ಮನೆಯಿಂದ ಪ್ರಾರಂಭವಾಗಬೇಕು. ಮರುಬಳಕೆ ಮಾಡಬಹುದಾದ ತ್ಯಾಜ್ಯವನ್ನು ಸಂಗ್ರಹಿಸಿ ಬಳಸಿಕೊಂಡು ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿಸುವದು ಉತ್ತಮ. ಕಾರ್ಯಕ್ರಮದ ಭಾಗವಾಗಿ ಮುಂದಿನ ದಿನಗಳಲ್ಲಿ ಉದ್ಯಾನವನದ ಅಳ್ಳೂರು ಗೇಟ್ನಿಂದ ಆನೆಚೌಕೂರು ಗೇಟ್ವರೆಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.
ಪರೀಕ್ಷೆಗೆ ಸಿದ್ಧಗೊಳ್ಳಲು ಕರೆ
ಪಾಲಿಬೆಟ್ಟ: ದ್ವಿತೀಯ ಪಿ.ಯು.ಸಿ. ಅಂತಿಮ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕೆಂದು ದ್ವಿತೀಯ ಪಿ.ಯು.ಸಿ. ಅರ್ಥಶಾಸ್ತ್ರ ಪಠ್ಯಪುಸ್ತಕ ರಚನಾ ಸದಸ್ಯರು ಹಾಗೂ ಭಾಗಮಂಡಲ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಕೆ.ಜೆ. ದಿವಾಕರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಮೀಪದ ಪಾಲಿಬೆಟ್ಟ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ‘ದ್ವಿತೀಯ ಪಿ.ಯು.ಸಿ. ಪರೀಕ್ಷಾ ಸಿದ್ಧತೆ’ ಎಂಬ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅವರು, ಪರೀಕ್ಷೆಗೆ ತಯಾರಿ ಮಾಡುವ ವಿದ್ಯಾರ್ಥಿಗಳು ಶಿಸ್ತು, ಸಮಯ ಪ್ರಜ್ಞೆ ಹಾಗೂ ಉಪನ್ಯಾಸಕರ ಮಾರ್ಗದರ್ಶನದಿಂದ ಉತ್ತಮ ಫಲಿತಾಂಶ ಪಡೆಯಬಹುದು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಕೆ.ಎಂ. ಭವಾನಿ ವಿದ್ಯಾರ್ಥಿಗಳು ಪರೀಕ್ಷೆಗೆ ಪೂರಕವಾದ ಮಾಹಿತಿಯನ್ನು ಪಡೆದುಕೊಂಡು ಉತ್ತಮ ಅಂಕಗಳನ್ನು ಪಡೆದು ಪೋಷಕರಿಗೆ ಹಾಗೂ ವಿದ್ಯಾಸಂಸ್ಥೆಗೆ ಗೌರವ ತರಬೇಕೆಂದರು. ಇತಿಹಾಸ ಉಪನ್ಯಾಸಕ ಪಿ.ಆರ್. ಶಿವದಾಸ್ ಸ್ವಾಗತಿಸಿದರೆ, ತಸ್ಲೀಮಾ ಪ್ರಾರ್ಥಿಸಿದರು.
ಪ್ರಯೋಗಾಲಯ ಉದ್ಘಾಟನೆ
ಮಡಿಕೇರಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆ.ಪಿ. ಬಾಣೆಯಲ್ಲಿ ರಾಷ್ಟ್ರೀಯ ಆವಿಷ್ಕಾರ ಅಭಿಯಾನದಡಿಯಲ್ಲಿ ನೂತನ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ ಹಾಗೂ ವಿಜ್ಞಾನ, ಗಣಿತ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ತಾ.ಪಂ. ಉಪಾಧ್ಯಕ್ಷ ಸಂತು ಸುಬ್ರಮಣಿ, ಗ್ರಾ.ಪಂ. ಅಧ್ಯಕ್ಷೆ ಶೈಲಾ ಕುಟ್ಟಪ್ಪ, ಗ್ರಾ.ಪಂ. ಸದಸ್ಯ ಮೂಸ, ಕುಂಜಿಲ ಪಯನರಿ ಜಮಾಅತ್ ಅಧ್ಯಕ್ಷ ಮಹಮ್ಮದ್ ಹಾಜಿ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಇಸ್ಮಾಯಿಲ್, ಕರ್ನಾಟಕ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಉಮಾವತಿ, ಜಿಲ್ಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಡಿ.ಕೆ. ರೇಖಾಕುಮಾರಿ, ಶಾಲಾ ಮುಖ್ಯೋಪಾಧ್ಯಾಯಿನಿ ಪಿ.ಕೆ. ಗಂಗಮ್ಮ, ಶಿಕ್ಷಕರು, ಎಸ್.ಡಿ.ಎಂ.ಸಿ. ಸದಸ್ಯರು, ಕಕ್ಕಬೆ ಕ್ಲಸ್ಟರ್ಗೆ ಒಳಪಡುವ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಜಗದೀಶ್ ಚಂದ್ರ ಬೋಸ್ ವಿಜ್ಞಾನ ಪ್ರಯೋಗಾಲಯವನ್ನು ಗ್ರಾ.ಪಂ. ಅಧ್ಯಕ್ಷರು ಉದ್ಘಾಟಿಸಿದರೆ, ವಸ್ತು ಪ್ರದರ್ಶನವನ್ನು ತಾ.ಪಂ. ಉಪಾಧ್ಯಕ್ಷರು ಉದ್ಘಾಟಿಸಿದರು. ಸಭೆಯ ಅಧ್ಯಕ್ಷ ಸ್ಥಾನವನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷರು ವಹಿಸಿದ್ದರು. ತಾ.ಪಂ. ಉಪಾಧ್ಯಕ್ಷ ಸಂತು ಸುಬ್ರಮಣಿ ಪ್ರಯೋಗಾಲಯಕ್ಕಾಗಿ ಒಂದು ಅಲ್ಮೆರಾವನ್ನು ಕೊಡುಗೆಯಾಗಿ ನೀಡಿದರು.ಸರಕಾರಿ ಶಾಲೆಯಲ್ಲಿ ಸೌಲಭ್ಯ
ಆಲೂರು-ಸಿದ್ದಾಪುರ: ಪ್ರಾರಂಭಿಕ ಹಂತದಲ್ಲೇ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಲಿ ಎಂಬ ಒಳ್ಳೆಯ ಕಾರ್ಯಕ್ರಮವನ್ನು ಸರ್ಕಾರ ಇತ್ತೀಚಿನ ದಿನಗಳಲ್ಲಿ ಮಾಡುವ ಮೂಲಕ ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಸೆಳೆಯುವ ಕೆಲಸವನ್ನು ಮಾಡುತ್ತಿದೆ. ಇಂದು ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗೂ ಮೀರಿದ ವ್ಯವಸ್ಥೆಗಳು ಇದ್ದರೂ ಅನೇಕರು ತಮ್ಮ ಮಕ್ಕಳನ್ನು ತಮ್ಮ ಪ್ರತಿಷ್ಠೆಗಾಗಿ ಖಾಸಗಿ ಶಾಲೆಗಳತ್ತ ಕಳುಹಿಸುತ್ತಿರುವದು ವಿಷಾದನೀಯ ಎಂದು ಸೊಮವಾರಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪ ರಾಜೇಶ್ ಅಭಿಪ್ರಾಯಪಟ್ಟರು,
ಕೊಡ್ಲಿಪೇಟೆ ಕ್ಲಸ್ಟರ್ ವ್ಯಾಪ್ತಿಯ ಕೊಡ್ಲಿಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸರ್ವ ಶಿಕ್ಷಣ ಅಭಿಯಾನ ಸಾರ್ವಜನಿಕ ಶಿಕಣ ಇಲಾಖೆ ವತಿಯಿಂದ ರಾಷ್ಟ್ರೀಯ ಅಭಿಯಾನ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ, ಗಣಿತ, ತಂತ್ರಜ್ಞಾನಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಹಿಣಿ ಸುಬ್ರಮಣಿ ಮಾತನಾಡಿ, ಮಕ್ಕಳು ಚಟುವಟಿಕೆಯಿಂದ ಆವಿಷ್ಕಾರಗಳನ್ನು ಮಾಡುವ ಹಾಗೂ ಪರಿಶೀಲನೆ ಮನೋದೋರಣೆ ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದರು.
ಅಧ್ಯಕ್ಷತೆಯನ್ನು ಕೊಡ್ಲಿಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸತ್ಯಪ್ರಕಾಶ್ ವಹಿಸಿದ್ದರು. ಕೊಡ್ಲಿಪೇಟೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸುರೇಶ್, ಮುಖ್ಯ ಶಿಕ್ಷಕ ನಟರಾಜ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜಾನಕಮ್ಮ ಹಾಗೂ ಕೊಡ್ಲಿಪೇಟೆ ಕ್ಲಸ್ಟರ್ ಶಾಲೆಯ ಮಕ್ಕಳು, ಶಿಕ್ಷಕರು ಪಾಲ್ಗೊಂಡಿದ್ದರು.
ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಕರೆ
ವೀರಾಜಪೇಟೆ: ಇಂದಿನ ವಿದ್ಯಾರ್ಥಿಗಳು ಭವಿಷ್ಯದ ನಕ್ಷತ್ರಗಳಂತೆ ಹೊಳೆಯುವ ಶಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಯುವಜನತೆಗೆ ಬೇಕಾದಷ್ಟು ಅವಕಾಶಗಳಿವೆ. ಒಮ್ಮೆ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಭಾರತವು ಜಗತ್ತಿನ ಬಲಿಷ್ಠ ಆರ್ಥಿಕ ಶಕ್ತಿಯಾಗಿ ಹೊರೆ ಹೊಮ್ಮುತ್ತಿರುವದರಿಂದ ಇಂದು ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಆಗುತ್ತಿವೆ ಎಂದು ಇಲ್ಲಿನ ವಿಜಯಾ ಬ್ಯಾಂಕ್ನ ನಿವೃತ್ತ ವ್ಯವಸ್ಥಾಪಕ ಎಂ.ಎಸ್. ರವಿ ಹೇಳಿದರು.
ವೀರಾಜಪೇಟೆ ಕಾವೇರಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾದ ‘ಉತ್ಕರ್ಷ’ ವಾಣಿಜ್ಯ ಉತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಸಿ.ಎಂ. ನಾಚಪ್ಪ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ನಂತರ ಪ್ರಪಂಚದ ನಿಜ ಜೀವನವನ್ನು ನೋಡಬೇಕಾಗಿದೆ. ಇಂದು ವಿಶ್ವದಲ್ಲಿ ಹೊಸ ಹೊಸ ಬದಲಾವಣೆಗಳು ಆಗುತ್ತಿವೆ. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ಹೊರಗಿನ ವ್ಯಾಪಾರದ ಜಗತ್ತಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಈ ಉತ್ಕರ್ಷ ವಾಣಿಜ್ಯ ಉತ್ಸವದಲ್ಲಿ ಕೊಡಗಿನ 12 ಕಾಲೇಜುಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು ಹಾಗೂ ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಆಯೋಜಿಸಿದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಅತಿಥಿಯಾಗಿ ಭಾಗವಹಿಸಿದ್ದ ವೀರಾಜಪೇಟೆಯ ಸೈಂಟ್ ಆನ್ಸ್ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಮದಲೇ ಮುತ್ತು ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಸವಾಲುಗಳನ್ನು ಎದುರಿಸಬೇಕು ಹಾಗೂ ಪ್ರಾಮಾಣಿಕತೆ ಪರಿಶ್ರಮ ಶ್ರದ್ಧೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಸ್ವರ್ಧೆಗಳಲ್ಲಿ ಓವರ್ಆಲ್ ಚಾಂಪಿಯನ್ ಆಗಿ ಕುಶಾಲನಗರದ ಎಂ.ಜಿ.ಎಂ. ಡಿಗ್ರಿ ಕಾಲೇಜು ಹೊರಹೊಮ್ಮಿತ್ತು ಹಾಗೂ ದ್ವಿತೀಯ ಸ್ಥಾನವನ್ನು ವೀರಾಜಪೇಟೆಯ ಸೈಂಟ್ ಆನ್ಸ್ ಕಾಲೇಜು ಪಡೆಯಿತು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ. ಉಷಾಲತಾ ಸ್ವಾಗತಿಸಿ, ಅತಿಥಿಗಳ ಪರಿಚಯ ಮಾಡಿದರು.
ಜಂತುಹುಳು ನಿವಾರಣೆ ದಿನಾಚರಣೆ
ಆಲೂರು-ಸಿದ್ದಾಪುರ: ಮಕ್ಕಳ ದೇಹದಲ್ಲಿ ಅಪೌಷ್ಟಿಕತೆ, ರಕ್ತದ ಕಣದಲ್ಲಿ ಕಬ್ಬಿಣಾಂಶದ ಕೊರತೆ ಹಾಗೂ ಜಂತುಹಳುಗಳ ಉತ್ಪತ್ತಿಯಿಂದ ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ. ಸುಪರ್ಣ ಕೃಷ್ಣಾನಂದ್ ಅಭಿಪ್ರಾಯಪಟ್ಟರು.
ಸಮೀಪದ ನೇರುಗಳಲೆ ಸರಕಾರಿ ಪ್ರೌಢಶಾಲೆಯಲ್ಲಿ ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿದ್ದರು. ಬಹುತೇಕ ಮಕ್ಕಳ ದೇಹದಲ್ಲಿ ಅಪೌಷ್ಟಿಕತೆ, ಕಬ್ಬಿಣಾಂಶದ ಕೊರತೆ ಹಾಗೂ ಜಂತುಹುಳುಗಳ ಉತ್ಪತ್ತಿಯಿಂದ ಮಕ್ಕಳು ರಕ್ತಹೀನತೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪ್ರತಿಯೊಬ್ಬರ ದೇಹದಲ್ಲಿ ರಕ್ತ ಪ್ರಮುಖ ಪಾತ್ರವಹಿಸುತ್ತದೆ ಎಂದರು.
ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ಶಿವಪ್ರಕಾಶ್ ಮಾತನಾಡಿ, ಜಂತುಹುಳು ಬಾಧೆ ಸಾಂಕ್ರಾಮಿಕವಾಗಿ ಹರಡುವ ಸಮಸ್ಯೆಯಾಗಿದೆ, ಮಕ್ಕಳಲ್ಲಿ ಹೆಚ್ಚಾಗಿ ಜಂತುಹುಳುವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಎಸ್ಡಿಎಂಸಿ ಪದಾಧಿಕಾರಿಗಳು, ಕಿರಿಯ ಆರೋಗ್ಯ ಸಹಾಯಕಿ ನಮಿತ ಮುಂತಾದವರಿದ್ದರು. ರಾಷ್ಟ್ರೀಯ ಜಂತುಹುಳು ನಿವಾರಣೆ ದಿನದ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ತೆರಳಿ ಜನರನ್ನು ಜಾಗೃತಗೊಳಿಸಿದರು.
ಫೀ.ಮಾ. ಕಾರ್ಯಪ್ಪ ಕಾಲೇಜು ಚಾಂಪಿಯನ್
ಗೋಣಿಕೊಪ್ಪಲು: ಕಾವೇರಿ ಎಜುಕೇಷನ್ ಸೊಸೈಟಿ ಹಾಗೂ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಸುವರ್ಣ ಮಹೋತ್ಸವ ವರ್ಷಾಚರಣೆಯ ಪ್ರಯುಕ್ತ ಗೋಣಿಕೊಪ್ಪಲು ಕಾವೇರಿ ಕಾಲೇಜುವಿನಲ್ಲಿ ಆಯೋಜಿಸಲಾಗಿದ್ದ ಅಂತರ ಕಾಲೇಜು ಬೋಧಕ-ಬೋಧಕೇತರ ಸಿಬ್ಬಂದಿಗಳ ಕ್ರೀಡಾಕೂಟದ ಮಹಿಳೆಯರ ಥ್ರೋಬಾಲ್ ಹಾಗೂ ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ತಂಡ ಅಂತಿಮ ಪಂದ್ಯದಲ್ಲಿ ಜಯಗಳಿಸುವ ಮೂಲಕ ಟ್ರೋಫಿಯನ್ನು ತನ್ನದಾಗಿಸಿಕೊಂಡು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಥ್ರೋಬಾಲ್ನಲ್ಲಿ ಆತಿಥೇಯ ಗೋಣಿಕೊಪ್ಪಲು ಕಾವೇರಿ ಕಾಲೇಜು ರನ್ನರ್ ಸ್ಥಾನಕ್ಕೆ ತೃಪ್ತಿ ಪಟ್ಟರೆ, ಕ್ರಿಕೆಟ್ನಲ್ಲಿ ವೀರಾಜಪೇಟೆ ಕಾವೇರಿ ಕಾಲೇಜು ತಂಡ ರನ್ನರ್ ಸ್ಥಾನ ಪಡೆದುಕೊಂಡಿತು.
ಪಂದ್ಯಾವಳಿಯ ಉತ್ತಮ ಎಸೆತಗಾರ ಪ್ರಶಸ್ತಿಯನ್ನು ವೀರಾಜಪೇಟೆ ಕಾವೇರಿ ಕಾಲೇಜಿನ ಸೋಮಣ್ಣ, ಉತ್ತಮ ದಾಂಡಿಗ ಪ್ರಶಸ್ತಿಯನ್ನು ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಯು.ಟಿ. ಪೆಮ್ಮಯ್ಯ, ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಕಾರ್ಯಪ್ಪ ಕಾಲೇಜಿನ ರಮೇಶ್ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕಾವೇರಿ ಕಾಲೇಜಿನ ಸುದೇಶ್ ಕುಮಾರ್ ಪಡೆದುಕೊಂಡರು.
ಪಂದ್ಯಾವಳಿಗೆ ವಿನ್ನರ್ ಟ್ರೋಫಿಯನ್ನು ದಿ. ಪುಳ್ಳಂಗಡ ಎಂ. ಚಿಣ್ಣಪ್ಪ ಜ್ಞಾಪಕಾರ್ಥವಾಗಿ ಪುಳ್ಳಂಗಡ ನಂಜಮ್ಮ ಮತ್ತು ಮಕ್ಕಳು ಹಾಗೂ ರನ್ನರ್ ಟ್ರೋಫಿಯನ್ನು ದಿ. ಮೂಕಳೇರ ಎಂ. ಸೋಮಣ್ಣ ಜ್ಞಾಪಕಾರ್ಥ ಕುಪ್ಪಣಮಾಡ ಭಾರತಿ ಮಾದಪ್ಪ ನೀಡಿದ್ದರು. ಜರ್ಸಿಯನ್ನು ಪ್ರೊ. ಎಂ.ಡಿ. ಅಕ್ಕಮ್ಮ ಪ್ರಾಯೋಜಿಸಿದ್ದರು. ಕಾವೇರಿ ಕಾಲೇಜಿನ ಬೋಧಕ ವರ್ಗ ಪಂದ್ಯಾವಳಿಯ ಆಯೋಜನೆಗೆ ಸಹಕಾರ ನೀಡಿದ್ದರು.
ಸಭಾ ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಕಾಲೇಜಿನ ಹಳೇ ವಿದ್ಯಾರ್ಥಿ ಹಾಗೂ ಕ್ರೀಡಾಪಟು ಚಂದ್ರ ಶೇಖರ್ ರೈ, ಆಲ್ ಇಂಡಿಯಾ ಯೂನಿವರ್ಸಿಟಿ ಹಾಕಿ ಆಟಗಾರ್ತಿ ವಿ.ಎಸ್. ರಂಜಿತಾ ಅವರನ್ನು ಸನ್ಮಾನಿಸಲಾಯಿತು. ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾದ ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕ ಸಿ.ಡಿ ಮಾದಪ್ಪ, ಉಪಪ್ರಾಂಶುಪಾಲೆ ಪ್ರೊ. ಎಂ.ಡಿ. ಅಕ್ಕಮ್ಮ, ಕಾವೇರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ಇನ್ನಿತರರು ಉಪಸ್ಥಿತರಿದ್ದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ವೀರಾಜಪೇಟೆ ಕಾವೇರಿ ಕಾಲೇಜು ಪ್ರಾಂಶುಪಾಲ ಪ್ರೊ. ಸಿ.ಎಂ. ನಾಚಪ್ಪ, ಪ್ರೊ. ಪೂಣಚ್ಚ, ಮಿನ್ನಂಡ ಜೋಯಪ್ಪ ಇನ್ನಿತ