ವೀರಾಜಪೇಟೆ, ಫೆ. 17 : ತಾ. 18ರಂದು (ಇಂದು) ಉದ್ಘಾಟನೆಗೊಳ್ಳುತ್ತಿರುವ ವೀರಾಜಪೇಟೆ ತಾಲೂಕು ಮಿನಿ ವಿಧಾನ ಸೌಧಕ್ಕೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪೂರ್ಣ ಕಾವiಗಾರಿಯನ್ನು ಕಂಡು ಲೋಕೋಪಯೋಗಿ ಸಹಾಯಕ ಅಭಿಯಂತರರನ್ನು ತರಾಟೆ ತೆಗೆದುಕೊಂಡರು.
ಮಿನಿ ವಿಧಾನಸೌಧದ ಕಾವiಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಅಂತಿಮ ಹಂತದ ಸಿದ್ಧತಾ ಕಾರ್ಯ ಬಾಕಿ ಇದೆ. ಮೇಲ್ನೋಟಕ್ಕೆ ಸುಣ್ಣ ಬಣ್ಣ ಬಳಿಯಲಾಗಿದ್ದು, ಕೆಲವು ಕಡೆಗಳಲ್ಲಿ ಹಾಗೆಯೇ ಬಿಟ್ಟಿರುವದನ್ನು ಕಂಡು ತರಾತುರಿಯಲ್ಲಿ ಉದ್ಘಾಟನೆ ಮಾಡುವ ಅವಶ್ಯಕತೆಯಾದರು ಏನು ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿಗಳು ಎಲ್ಲ ಕಾವiಗಾರಿ ಪೂರ್ಣಗೊಂಡ ಮೇಲೆ ಮುಂದಿನ ತಿಂಗಳು ಉದ್ಘಾಟನೆ ಮಾಡಬಹುದಿತ್ತು ಎಂದು ಹೇಳಿದರು.
ವಿಧಾನ ಸೌಧದ ಸುತ್ತಮುತ್ತ ಪರಿಸರ ಹಾಗೂ ನೀಲಿ ನಕಾಶೆಯನ್ನು ವೀಕ್ಷಿಸಿ ತಂತಿ ಬೇಲಿ ತಡೆಗೋಡೆಗೆ ಆಕ್ಷೇಪ ವ್ಯಕ್ತಪಡಿಸಿ ಶಾಶ್ವತವಾದ ತಡೆಗೋಡೆಗೆ ಮರು ಪ್ರಸ್ತಾವನೆ ಕಳುಹಿಸಿ ಎಂದರಲ್ಲದೆ; ಕಾವiಗಾರಿ ಪೂರ್ಣಗೊಳ್ಳದೆ ಕಟ್ಟಡವನ್ನು ಹಸ್ತಾಂತರಿಸಿದರೆ ಪಡೆದುಕೊಳ್ಳಬೇಡಿ ಎಂದು ಸ್ಥಳದಲ್ಲಿಯೇ ಹಾಜರಿದ್ದ ತಹಶೀಲ್ದಾರ್ ಆರ್. ಗೋವಿಂದರಾಜು ಅವರಿಗೆ ಆದೇಶಿಸಿದರು. ಈ ಸಂದಭರ್À ಶಿರಸ್ತೇದಾರ್ ಕೆ.ಎಂ ಚಿಣ್ಣಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.