ಮಡಿಕೇರಿ, ಫೆ. 17: ಮಲೆಯಾಳಿ ಸಂಘದ ಪ್ರಮುಖರು ಮಡಿಕೇರಿಯ ಹೊಟೇಲ್ ಅತಿಥಿಯಲ್ಲಿ ಸೇರಿ ಕೊಡಗಿನ ಎಲ್ಲಾ ಹಿಂದೂ ಮಲೆಯಾಳಿಗಳನ್ನು ಒಂದುಗೂಡಿಸುವ ಉದ್ದೇಶದಿಂದ ಕೊಡಗು ಜಿಲ್ಲಾ ಹಿಂದೂ ಮಲೆಯಾಳಿ ಸಮಾಜಗಳ ಒಕ್ಕೂಟ ಎಂಬ ಹೆಸರಿನಲ್ಲಿ ಜಿಲ್ಲಾ ಮಟ್ಟದಲ್ಲಿ ಅಸ್ತಿತ್ವಕ್ಕೆ ತರಲು ತೀರ್ಮಾನಿಸಿದೆ. ಸಭೆಯಲ್ಲಿ ಜಿಲ್ಲೆಯ ವಿವಿಧ ಹಿಂದೂ ಮಲೆಯಾಳಿ ಸಂಘದ ಅಧ್ಯಕ್ಷರುಗಳಾದ ಮಡಿಕೇರಿಯ ಅಧ್ಯಕ್ಷ ಕೆ.ಎಸ್. ರಮೇಶ್, ವೀರಾಜಪೇಟೆಯ ಇ.ಸಿ. ಜೀವನ್, ಹರ್ಷವರ್ಧನ್, ಸೋಮವಾರಪೇಟೆಯ ಪಿ.ಡಿ. ಪ್ರಕಾಶ್, ಬಾಬು ಮೂರ್ನಾಡ್, ಪುಷ್ಕರನ್ ಒಂಟಿಯಂಗಡಿ, ಬಾಲಕೃಷ್ಣ ಮರಗೋಡು, ಪಿ.ಎಸ್. ಶರತ್‍ಕಾಂತ್ ಗೋಣಿಕೊಪ್ಪ, ಗಂಗಾಧರನ್ ನಾಕೂರ್, ಪಿ.ಕೆ. ಶಶಿಕುಮಾರ್ ಚೆಟ್ಟಳ್ಳಿ ಹಾಗೂ ಪ್ರಮುಖರಾದ ಟಿ.ಕೆ. ಸುಧೀರ್, ವಿ.ಎಂ. ವಿಜಯನ್, ಕೆ.ವಿ. ಧರ್ಮೇಂದ್ರ, ಎಂ.ಎಸ್. ದಿನೇಶ್, ಟಿ.ವಿ. ಕಿಶೋರ್, ಪಿ.ಎಸ್. ಅನಿಲ್ ಕುಮಾರ್, ಟಿ.ವಿ. ರಾಜೇಶ್, ಪಿ.ವಿ. ಸುಬ್ರಮಣಿ, ಕೆ. ರವಿ ಅಪ್ಪುಕುಟ್ಟನ್ ಹಾಗೂ ಪಿ.ಬಿ. ಭರತ್ ಹಾಜರಿದ್ದರು.
ತಾತ್ಕಾಲಿಕ ಕೊಡಗು ಹಿಂದೂ ಮಲೆಯಾಳಿ ಸಮಾಜಗಳ ಒಕ್ಕೂಟದ ಅಧ್ಯಕ್ಷರಾಗಿ ಮಡಿಕೇರಿಯ ಕೆ.ಎಸ್. ರಮೇಶ್ ಅವರನ್ನು, ಚೆಟ್ಟಳ್ಳಿಯ ಶಶಿಕುಮಾರ್ ಅವರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಮೂರ್ನಾಡುವಿನ ಬಾಬು ಅವರನ್ನು ಜಿಲ್ಲಾ ಖಜಾಂಚಿಯಾಗಿ ನೇಮಿಸಿ, ಮುಂದಿನ ದಿನದಲ್ಲಿ ಸಂಪೂರ್ಣ ಹೊಸ ಸಮಿತಿಯ ರಚನೆಯ ಜವಾಬ್ದಾರಿ ನೀಡಲಾಯಿತು.