ಸಿದ್ದಾಪುರ, ಫೆ. 16: ಸಿದ್ದಾಪುರದ ಶ್ರೀ ಮುತ್ತಪ್ಪ ಭಗವತಿ ದೇವಾಲಯದ ವಾರ್ಷಿಕೋತ್ಸವ ತಾ. 17 ರಿಂದ 21 ರವರೆಗೆ ನಡೆಯಲಿದೆ. ತಾ. 17 ರಂದು ಬೆಳಿಗ್ಗೆ 5.30 ಕ್ಕೆ ಪಂಚಗವ್ಯ ಪುಣ್ಯಾಹ, 6 ಗಂಟೆಗೆ ಗಣಪತಿ ಹೋಮ, 9.30 ಕ್ಕೆ ಧ್ವಜಾರೋಹಣ, 10.30 ರಿಂದ 11.30 ರವರೆಗೆ ದೀಪಾರಾಧನೆ, 1 ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ, ಸಂಜೆ 6.51 ಕ್ಕೆ ಸಂಧ್ಯಾದೀಪ, ಮಹಾಪೂಜೆ, ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ.ತಾ. 18 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, 8.30 ರಿಂದ ಚಂಡಿಕಾ ಹೋಮ, 12.30 ಕ್ಕೆ ಮಹಾಪೂಜೆ, ತೀರ್ಥಪ್ರಸಾದ, 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ 6.30 ಕ್ಕೆ ದೇವರ ಬಲಿ, ಮಹಾಪೂಜೆ, ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ.

ತಾ. 19 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, 8 ರಿಂದ 12 ರವರೆಗೆ ದುರ್ಗಾಪೂಜೆ, ಆಶ್ಲೇಷಬಲಿ, 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ 5.30 ಕ್ಕೆ ಅಲಂಕೃತ ಮಂಟಪದಲ್ಲಿ ಕಾವೇರಿ ನದಿಯಲ್ಲಿ ದೇವಿಯ ಸ್ನಾನ, 9 ಗಂಟೆಗೆ ದೇವಿಯ ನರ್ತನ, ರಾತ್ರಿ 9.30 ಕ್ಕೆ ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ.

ತಾ. 20 ರಂದು ಬೆಳಿಗ್ಗೆ 6 ಗಂಟೆಗೆ ಮಹಾಗಣಪತಿ ಹೋಮ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ 5 ಗಂಟೆಗೆ ಶ್ರೀ ಮುತ್ತಪ್ಪನ ಮಲೆ ಇಳಿಸುವದು, ಸಂಜೆ 7 ಗಂಟೆಗೆ ಶಾಸ್ತಪ್ಪನ ವೆಳ್ಳಾಟಂ, ರಾತ್ರಿ 8 ಗಂಟೆಗೆ ಗುಳಿಗನ ವೆಳ್ಳಾಟಂ, ರಾತ್ರಿ 8.30 ಕ್ಕೆ ಮಕ್ಕಳ ಸಾಂಸ್ಕøತಿ ಕಾರ್ಯಕ್ರಮ, ರಾತ್ರಿ 9 ಕ್ಕೆ ವಾಸೂರಿಮಾಲ ಸ್ನಾನಕ್ಕೆ ಕಾವೇರಿ ನದಿಗೆ ಹೊರಡುವದು, 9.30 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

ತಾ. 21 ರಂದು ಪ್ರಾತಃಕಾಲ 2 ಗಂಟೆಗ ಗುಳಿಗನ ತೆರೆ, 6.30 ಕ್ಕೆ ಶಾಸ್ತಪ್ಪನ ತೆರೆ, 7.30 ಕ್ಕೆ ತಿರುವಪ್ಪನ ಹಾಗೂ ಮುತ್ತಪ್ಪನ ತೆರೆ, 8 ಗಂಟೆಗೆ ಭಗವತಿಯ ತೆರೆ, 11 ಗಂಟೆಗೆ ವಿಷ್ಣುಪೂರ್ತಿಯ ತೆರೆ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣ ನಡೆಯಲಿದೆ.