ಗೋಣಿಕೊಪ್ಪಲು, ಫೆ.17: ಪೆÇನ್ನಂಪೇಟೆ ಪೆÇಲೀಸ್ ಠಾಣೆಯ ಸಮೀಪವೇ ಪುತ್ತಾಮನೆ ಗಣೇಶ್ ಹಾಗೂ ರಾಧಾ ದಂಪತಿಯ ಮನೆಯಲ್ಲಿ ದ್ವಿತೀಯ ಬಾರಿಗೆ ಕಳವು ಮಾಡಲಾದ ಪ್ರಕರಣವನ್ನು ಶೀಘ್ರ ಬಯಲಿಗೆಳೆಯುವಂತೆ ಅಮ್ಮಕೊಡವ ಸಮಾಜದ ಅಧ್ಯಕ್ಷ, ಜಿ.ಪಂ. ಸದಸ್ಯ ಬಿ.ಎನ್.ಪ್ರಥ್ಯು ಒತ್ತಾಯಿಸಿದ್ದಾರೆ.
ಈ ಹಿಂದೆ ಇದೇ ಮನೆಗೆ ರಾತ್ರಿ 12 ಗಂಟೆ ಸುಮಾರಿಗೆ ನುಸುಳಿದ ಖದೀಮರು ನಗದು ಹಾಗೂ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಅಂದು ಮಾಲೀಕ ಗಣೇಶ್ ಅವರು ಚಿಕಿತ್ಸೆಗಾಗಿ ಮೈಸೂರಿಗೆ ತೆರಳಿದ್ದರು. ಈ ಬಗ್ಗೆ ಆಗಿನ ಪೆÇನ್ನಂಪೇಟೆ ಠಾಣಾಧಿಕಾರಿ ಜಯರಾಮ್ ಅವರಲ್ಲಿ ಹಲವು ಬಾರಿ ದೂರು ನೀಡಿದ್ದರೂ ಪ್ರಕರಣ ಬೆಳಕಿಗೆ ತರುವಲ್ಲಿ ಪೆÇಲೀಸರು ವಿಫಲರಾಗಿದ್ದರು. ಇದೀಗ ದ್ವಿತೀಯ ಕಳವು ಪ್ರಕರಣದ ವಿಫಲ ಯತ್ನ ಕುಟುಂಬವನ್ನು ಅಧೀರಗೊಳಿಸಿತ್ತು ಕೂಡಲೇ ಆರೋಪಿಗಳ ಪತ್ತೆಗೆ ಪ್ರಥ್ಯು ಒತ್ತಾಯಿಸಿದ್ದಾರೆ.
ಪೆÇಲೀಸ್ ಅಧೀಕ್ಷಕ ರಾಜೇಂದ್ರ ಪ್ರಸಾದ್ ಹಾಗೂ ದಕ್ಷಿಣ ವಲಯ ಐಜಿ ವಿಫುಲ್ಕುಮಾರ್ ಸಿಂಗ್ ಅವರಿಗೂ ಪ್ರಕರಣದ ಶೀಘ್ರ ಪತ್ತೆಗೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಪೆÇನ್ನಂಪೇಟೆ ಠಾಣಾ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ನಿರಂತರ ಕಳ್ಳತನ ನಡೆಯುತ್ತಿದ್ದರೂ ಪೆÇಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗುತ್ತಿದ್ದಾರೆ. ಕೇರಳದ ಕ್ರಿಮಿನಲ್ ವ್ಯಕ್ತಿಗಳೊಂದಿಗೆ ಸ್ಥಳೀಯ ವ್ಯಕ್ತಿಗಳು ಶಾಮೀಲಾಗಿ ಕಳ್ಳತನ ನಡೆಸಿರುವ ಸಾಧ್ಯತೆ ಬಗ್ಗೆ ಈ ಹಿಂದೆ ತಿತಿಮತಿಯಲ್ಲಿ ಜರುಗಿದ ಕೊಡಗು-ಕೇರಳ ಪೆÇಲೀಸ್ ಸಂಪರ್ಕ ಸಭೆಯಲ್ಲಿಯೂ ಚರ್ಚೆ ನಡೆದಿದೆ.
ಪುತ್ತಾಮನೆ ಗಣೇಶ್ ಮನೆಗೆ ದ್ವಿತೀಯ ಬಾರಿ ಕಳ್ಳರು ನುಗ್ಗಲು ಬೇರಾವದೇ ಕಾರಣವಿದೆಯೇ ಎಂಬದನ್ನೂ ಪೆÇಲೀಸರು ಶೋಧ ಕಾರ್ಯ ನಡೆಸುವ ಅಗತ್ಯವಿದೆ ಎಂದೂ ಪ್ರಥ್ಯು ಹೇಳಿದ್ದಾರೆ.